ವಾಷಿಂಗ್ಟನ್: ಅಮೆರಿಕದಲ್ಲಿ ನೆಲಸಿರುವ ವಲಸಿಗರ ಮಕ್ಕಳಿಗೆ ಜನ್ಮದತ್ತವಾಗಿ ಸಿಗುವ ಪೌರತ್ವ ಹಕ್ಕಿನ ಮೇಲೆ ವಿಧಿಸಿರುವ ನಿರ್ಬಂಧಗಳ ಭಾಗಶಃ ಅನುಷ್ಠಾನಕ್ಕೆ ಅನುಮತಿ ನೀಡುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
ಈ ಕುರಿತು ಟ್ರಂಪ್ ಆಡಳಿತವು ಸುಪ್ರೀಂ ಕೋರ್ಟ್‌ಗೆ ಗುರುವಾರ ತುರ್ತು ಮೇಲ್ಮನವಿ ಸಲ್ಲಿಸಿದೆ.
‘ಜನ್ಮದತ್ತವಾಗಿ ಸಿಗುವ ಪೌರತ್ವ ಹಕ್ಕು ನಿರ್ಬಂಧಿಸುವ ಆದೇಶಕ್ಕೆ ಟ್ರಂಪ್ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಸಹಿ ಹಾಕಿದ್ದರು. ಈ ಆದೇಶ ಜಾರಿಗೆ ಮೇರಿಲ್ಯಾಂಡ್, ಮೆಸಾಚುಸೆಟ್ಸ್ ಹಾಗೂ ವಾಷಿಂಗ್ಟನ್ ಜಿಲ್ಲಾ ನ್ಯಾಯಾಲಯಗಳು ತಡೆ ನೀಡಿವೆ.
ಟ್ರಂಪ್ ಆಡಳಿತ ಹೊರಡಿಸಿರುವ ಆದೇಶದ ಪ್ರಕಾರ, ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿರುವವರಿಗೆ ಫೆಬ್ರುವರಿ 19ರ ನಂತರ ಜನಿಸುವ ಮಕ್ಕಳಿಗೆ ಜನ್ಮದತ್ತವಾಗಿ ಸಿಗುವ ಪೌರತ್ವದ ಹಕ್ಕನ್ನು ನೀಡಲಾಗುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.