ವಾಷಿಂಗ್ಟನ್/ನ್ಯೂಯಾರ್ಕ್: ಹಾರ್ವರ್ಡ್ ವಿಶ್ವವಿದ್ಯಾಲಯದೊಂದಿಗಿನ ಬಾಕಿ ಇರುವ ಒಪ್ಪಂದಗಳನ್ನು ಕೂಡ ರದ್ದುಪಡಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಮುಂದಾಗಿದೆ.
ಎಲ್ಲ ಫೆಡರಲ್ ಏಜೆನ್ಸಿಗಳಿಗೆ ಅಮೆರಿಕ ಜನರಲ್ ಸರ್ವೀಸಸ್ ಅಡ್ಮಿನಿಷ್ಟ್ರೇಶನ್ ಮಂಗಳವಾರ ಬರೆದಿರುವ ಪತ್ರದಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ.
‘ಹಾರ್ವರ್ಡ್ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ವೇಳೆ, ಜನಾಂಗೀಯ ತಾರತಮ್ಯ ಮಾಡುತ್ತಿದೆ. ಯೆಹೂದಿ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ತಡೆಯುವಲ್ಲಿ ಕೂಡ ವಿ.ವಿ ವಿಫಲವಾಗಿದೆ’ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
‘ಈ ಎಲ್ಲ ಕಾರಣಗಳಿಂದಾಗಿ, ವಿಶ್ವವಿದ್ಯಾಲಯದೊಂದಿಗಿನ ಒಪ್ಪಂದಗಳನ್ನು ಬಾಕಿ ಒಪ್ಪಂದಗಳನ್ನು ರದ್ದುಗೊಳಿಸಬೇಕು’ ಎಂದು ಏಜೆನ್ಸಿಗಳಿಗೆ ನಿರ್ದೇಶನ ನೀಡಲಾಗಿದೆ.
ಟ್ರಂಪ್ ಆಡಳಿತ ಕೈಗೊಂಡಿರುವ ಈ ಕ್ರಮದ ಕುರಿತು ವಿಶ್ವವಿದ್ಯಾಲಯವು ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.