ADVERTISEMENT

ಟ್ರಂಪ್ ಯಶಸ್ವಿ ಆಡಳಿತಗಾರ, ಬೈಡನ್‌ ದುರ್ಬಲ ವ್ಯಕ್ತಿ: ನಿಕ್ಕಿ ಹಾಲೆ

ಭಾರತೀಯ ಮೂಲದ ಅಮೆರಿಕದ ರಾಜಕಾರಣಿ ನಿಕ್ಕಿ ಹಾಲೆ ಪ್ರಶಂಸೆ

ಪಿಟಿಐ
Published 25 ಆಗಸ್ಟ್ 2020, 9:03 IST
Last Updated 25 ಆಗಸ್ಟ್ 2020, 9:03 IST
ನಿಕ್ಕಿ ಹಾಲೆ
ನಿಕ್ಕಿ ಹಾಲೆ   

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರ ರಂಗೇರುತ್ತಿರುತ್ತಿದ್ದು, ಭಾರತ ಮೂಲದ ಅಮೆರಿಕದ ರಾಜಕಾರಣಿ ನಿಕ್ಕಿ ಹಾಲೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ರಾಜಕೀಯ ಚಟುವಟಿಕೆಗಳನ್ನು ಹೊಗಳುವ ಜತೆಗೆ ಅವರನ್ನು ಮರು ಆಯ್ಕೆ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಡೊನಾಲ್ಡ್‌ ಟ್ರಂಪ್ ಅವರಿಗೆ ದೇಶಕಟ್ಟುವಷ್ಟು ಬಲವಿದೆ. ಹಲವು ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸಿದ ದಾಖಲೆಗಳಿವೆ.ಆದರೆ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಬೈಡೆನ್ ಅವರಲ್ಲಿರುವುದು ’ಸೋಲಿನ ದಾಖಲೆಗಳು’ ಮಾತ್ರ. ಅವರೊಬ್ಬ ದುರ್ಬಲ ವ್ಯಕ್ತಿ ಎಂದು ನಿಕ್ಕಿ ಹಾಲೆ ಟೀಕಿಸಿದ್ದಾರೆ.

ವಿಶ್ವಸಂಸ್ಥೆಯ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹಾಲೆ, ಇಲ್ಲಿ ನಡೆಯುತ್ತಿರುವರಿಪಬ್ಲಿಕನ್ ನ್ಯಾಷನಲ್‌ ಕನ್ವೆನ್ಷನ್‌ನಲ್ಲಿ ಮಾತನಾಡಿ, ’ಡೆಮಾಕ್ರಟಿಕ್ ಪಕ್ಷದ ಬೈಡನ್ –ಕಮಲಾ ಜೋಡಿ, ಜಗತ್ತಿನ ಹಲವೆಡೆ ಈಗಾಗಲೇ ಸೋಲು ಅನುಭವಿಸಿರುವ ಸಮಾಜವಾದ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದಾರೆ. ಈ ಜೋಡಿಯ ಪ್ರತಿಪಾದಿಸುವ ಸಿದ್ಧಾಂತ ಇರಾನ್, ಐಎಸ್‌ ಹಾಗೂ ಚೀನಾದಂತಹ ಕಮ್ಯೂನಿಸ್ಟ್‌ ರಾಷ್ಟ್ರಗಳಿಗೆ ಹೊಂದಬಹುದು’ ಎಂದು ಕುಟುಕಿದ್ದಾರೆ. ಆದರೆ, ಡೊನಾಲ್ಡ್‌ ಟ್ರಂಪ್ ಚೀನಾದ ವಿರುದ್ಧ ಕಠಿಣನಿಲುವು ತಳೆದಿದ್ದಾರೆ. ಐಎಸ್‌ ಉಗ್ರಗಾಮಿ ಚಟುವಟಿಕೆಗಳನ್ನು ಹತ್ತಿಕ್ಕಲು ಕಠಿಣ ಕ್ರಮಗಳನ್ನು ತಗೆದುಕೊಂಡಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.