ADVERTISEMENT

ಭಾರತ ಸುಂಕದ ಮೂಲಕ ನಮ್ಮನ್ನು ಕೊಲ್ಲುತ್ತಿದೆ: ಟ್ರಂಪ್

ಪಿಟಿಐ
Published 3 ಸೆಪ್ಟೆಂಬರ್ 2025, 13:26 IST
Last Updated 3 ಸೆಪ್ಟೆಂಬರ್ 2025, 13:26 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

– ರಾಯಿಟರ್ಸ್

ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ವ್ಯಾಪಾರ ಮತ್ತು ಸುಂಕ ಸಮರದ ನಡುವೆ ಭಾರತವು ಸಂಕದ ಮೂಲಕ ನಮ್ಮನ್ನು ಕೊಲ್ಲುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ADVERTISEMENT

ಭಾರತ, ಚೀನಾ, ಬ್ರೆಜಿಲ್ ಸೇರಿದಂತೆ ಹಲವು ರಾಷ್ಟ್ರಗಳು ನಮ್ಮ ರಾಷ್ಟ್ರದ ಆಮದುಗಳ ಮೇಲೆ ಅಧಿಕ ಸುಂಕ ವಿಧಿಸುತ್ತಿವೆ. ಅವುಗಳು ಸುಂಕದಿಂದ ನಮ್ಮನ್ನು ಕೊಲ್ಲುತ್ತಿವೆ ಎಂದು ಸ್ಕಾಟ್ ಜೆನ್ನಿಂಗ್ಸ್ ರೇಡಿಯೊ ಕಾರ್ಯಕ್ರಮದಲ್ಲಿ ಟ್ರಂಪ್ ಹೇಳಿದ್ದಾರೆ.

‘ಜಗತ್ತಿನ ಯಾವುದೇ ಮನುಷ್ಯನಿಗಿಂತ ಉತ್ತಮವಾಗಿ ಸುಂಕವನ್ನು ಅರ್ಥಮಾಡಿಕೊಂಡಿದ್ದೇನೆ. ನಾನೀಗ ಸುಂಕ ವಿಧಿಸುತ್ತಿರುವುದರಿಂದ ಅವರೆಲ್ಲರೂ ಸುಂಕ ಕಡಿತ ಮಾಡುತ್ತಿದ್ದಾರೆ. ಭಾರತವು ಅತಿ ಹೆಚ್ಚು ಸುಂಕ ವಿಧಿಸುವ ದೇಶವಾಗಿದೆ. ಆದರೆ, ನಾವು ಸುಂಕ ವಿಧಿಸಲು ಅವರು ವಿರೋಧಿಸುತ್ತಿದ್ದಾರೆ’ ಎಂದು ಹೇಳಿದರು.

ಭಾರತದ ಸರಕುಗಳಿಗೆ ನಾನು ಸುಂಕರಹಿತ ಆದೇಶ ಮಾಡಿದರೆ, ಅದೇ ರೀತಿಯ ಆಫರ್ ಕೊಡಲು ಅವರು ಸಿದ್ಧರಿಲ್ಲ. ಹಾಗಾಗಿ, ನಾವು ಸುಂಕ ವಿಧಿಸಲೇಬೇಕು. ಇದರಿಂದ ನಮ್ಮ ಆರ್ಥಿಕತೆ ಬಲಿಷ್ಠವಾಗುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ.

ವಿವಿಧ ದೇಶಗಳ ಮೇಲೆ ವಿಧಿಸಿರುವ ಎಲ್ಲ ಸುಂಕಗಳು ಕಾನೂನುಬಾಹಿರ ಎಂದುಫೆಡರಲ್ ಕೋರ್ಟ್ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್, ಆ ಪ್ರಕರಣವೇ ವಿದೇಶಗಳ ಪ್ರಾಯೋಜಿತ ಎಂದು ಜರಿದಿದ್ದಾರೆ. ಅವರು ಈ ರೀತಿಯ ಲಾಭ ಪಡೆದುಕೊಳ್ಳಲು ಇನ್ನುಮುಂದೆ ಅವಕಾಶವಿಲ್ಲ ಎಂದಿದ್ದಾರೆ.

ಅಮೆರಿಕವು ಭಾರತದ ಆಮದುಗಳ ಮೇಲೆ ಶೇ 50ರಷ್ಟು ಸುಂಕ ವಿಧಿಸುತ್ತಿದೆ. ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕೆ ದಂಡದ ರೂಪದಲ್ಲಿ ಶೇ 25 ಮತ್ತು ಈ ಹಿಂದೆ ಘೋಷಿಸಿದ್ದ ಶೇ 25ರಷ್ಟು ದಂಡ ಸೇರಿ ಶೇ 50ರಷ್ಟು ತೆರಗೆ ಹಾಕುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.