ADVERTISEMENT

ಫಿಲಿಪ್ಪೀನ್ಸ್‌: ಪ್ರಬಲ ಚಂಡಮಾರುತ, 12 ಮಂದಿ ಸಾವು

ಏಜೆನ್ಸೀಸ್
Published 17 ಡಿಸೆಂಬರ್ 2021, 13:33 IST
Last Updated 17 ಡಿಸೆಂಬರ್ 2021, 13:33 IST
ಫಿಲಿಪ್ಪೀನ್ಸ್‌ನ ಸಿಬು ಪ್ರಾಂತ್ಯದ ತಾಲಿಸೇ ಪಟ್ಟಣದಲ್ಲಿ ಭಾರಿ ಚಂಡಮಾರುತದಿಂದಾಗಿ ವಿದ್ಯುತ್ ಕಂಬಗಳು ರಸ್ತೆ ಮೇಲೆ ಬಿದ್ದಿವೆ –ಎಎಫ್‌ಪಿ ಚಿತ್ರ.
ಫಿಲಿಪ್ಪೀನ್ಸ್‌ನ ಸಿಬು ಪ್ರಾಂತ್ಯದ ತಾಲಿಸೇ ಪಟ್ಟಣದಲ್ಲಿ ಭಾರಿ ಚಂಡಮಾರುತದಿಂದಾಗಿ ವಿದ್ಯುತ್ ಕಂಬಗಳು ರಸ್ತೆ ಮೇಲೆ ಬಿದ್ದಿವೆ –ಎಎಫ್‌ಪಿ ಚಿತ್ರ.   

ಮನಿಲಾ, ಫಿಲಿಪ್ಪೀನ್ಸ್‌: ಫಿಲಿಪ್ಪೀನ್ಸ್‌ನಲ್ಲಿ ಶುಕ್ರವಾರ ಬೀಸಿದ ಪ್ರಬಲ ಚಂಡಮಾರುತದಿಂದಾಗಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಉಂಟಾದ ಪ್ರವಾಹದಲ್ಲಿ ಗ್ರಾಮಗಳು ಮುಳುಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರಿ ಗಾಳಿಯಿಂದ ಮನೆಗಳ ಚಾವಣಿಗಳು ಹಾರಿದ್ದು, ಹಲವೆಡೆ ಮರಗಳು ಉರುಳಿ ದಕ್ಷಿಣ ಮತ್ತು ಮಧ್ಯ ದ್ವೀಪ ಪ್ರಾಂತ್ಯಗಳಲ್ಲಿ ವಿದ್ಯುತ್‌ ಕಡಿತಗೊಂಡಿದೆ. ಹೋಟೆಲ್‌, ವಿಮಾನ ನಿಲ್ದಾಣವೊಂದರ ಕಟ್ಟಡಗಳು ಹಾನಿಗೊಂಡಿವೆ. ಚಂಡಮಾರುತವು ಅಪ್ಪಳಿಸುವ ಮುನ್ನೆಚ್ಚರಿಕೆಯಿಂದ 3 ಲಕ್ಷಕ್ಕೂ ಹೆಚ್ಚು ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT