ADVERTISEMENT

ಮಲ್ಯ ಪುತ್ರನ ಒಡೆತನದ ವಿಹಾರ ನೌಕೆ ಮಾರಾಟಕ್ಕೆ ಆದೇಶ

ಪಿಟಿಐ
Published 27 ಜನವರಿ 2020, 19:53 IST
Last Updated 27 ಜನವರಿ 2020, 19:53 IST
   

ಲಂಡನ್‌: ಫೋರ್ಸ್ ಇಂಡಿಯಾ ಲಿಮಿಟೆಡ್ ಒಡೆತನದ ಐಷಾರಾಮಿ ವಿಹಾರ ನೌಕೆಯನ್ನು ಮಾರಾಟ ಮಾಡಿ, ಆ ಹಣವನ್ನು ಕತಾರ್ ನ್ಯಾಷನಲ್ ಬ್ಯಾಂಕ್‌ಗೆ ಮರುಪಾವತಿಸುವಂತೆ ಇಲ್ಲಿನ ನ್ಯಾಯಾಲಯ ಸೋಮವಾರ ಆದೇಶಿಸಿದೆ.

ಉದ್ಯಮಿ ವಿಜಯ್‌ ಮಲ್ಯ ಪುತ್ರ ಸಿದ್ಧಾರ್ಥ ಮಲ್ಯ ಅವರು ಈ ನೌಕೆಯ ಮಾಲೀಕ ಎಂದು ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವೇಳೆ ಬ್ಯಾಂಕ್‌ ಹೇಳಿದೆ.

ಅಂದಾಜು ₹47.26 ಕೋಟಿ ಸಾಲ ಮರುಪಾವತಿಗೆ ಅನುವು ಮಾಡಿಕೊಡಬೇಕು ಎಂದು ಬ್ಯಾಂಕ್‌ ನ್ಯಾಯಾಲಯಕ್ಕೆ ತಿಳಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.