ADVERTISEMENT

ವಿಕಿಲೀಕ್ಸ್‌ ಪ್ರಕರಣ: ಅಸಾಂಜೆ ಹಸ್ತಾಂತರ ಸದ್ಯಕ್ಕಿಲ್ಲ

ಏಜೆನ್ಸೀಸ್
Published 26 ಮಾರ್ಚ್ 2024, 15:38 IST
Last Updated 26 ಮಾರ್ಚ್ 2024, 15:38 IST
ಜೂಲಿಯನ್ ಅಸ್ಸಾಂಜೆ
ಜೂಲಿಯನ್ ಅಸ್ಸಾಂಜೆ   

ಲಂಡನ್‌: ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜೆ ಅವರನ್ನು ಬೇಹುಗಾರಿಕೆ ಆರೋಪದ ಮೇಲೆ ತಕ್ಷಣವೇ ಅಮೆರಿಕಕ್ಕೆ ಹಸ್ತಾಂತರಿಸಲು ಆಗುವುದಿಲ್ಲ ಎಂದು ಬ್ರಿಟನ್‌ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ. ಇದು ಈ ಪ್ರಕರಣದಲ್ಲಿ ಅಸಾಂಜೆ ಅವರಿಗೆ ಸಂದ ಭಾಗಶಃ ವಿಜಯ ಎನ್ನಲಾಗುತ್ತಿದೆ.

ಅಮೆರಿಕಕ್ಕೆ ಅಸಾಂಜೆ ಅವರನ್ನು ಹಸ್ತಾಂತರಿಸಿದರೆ ಅಲ್ಲಿ ಅವರಿಗೆ ಏನಾಗುತ್ತದೆ ಎಂಬುದರ ಕುರಿತು ಅಮೆರಿಕದ ಅಧಿಕಾರಿಗಳು ಹೆಚ್ಚಿನ ಭರವಸೆ ನೀಡಬೇಕು. ಇಲ್ಲದಿದ್ದರೆ ಅಸಾಂಜೆ ಅವರಿಗೆ ಹೊಸದಾಗಿ ಮೇಲ್ಮನವಿ ಅರ್ಜಿ ಸಲ್ಲಿಸಲು ಅನುಮತಿ ನೀಡಬೇಕಾಗುತ್ತದೆ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ವಿಕ್ಟೋರಿಯಾ ಶಾರ್ಪ್‌, ಜೆರೆಮಿ ಜಾನ್ಸನ್‌ ಹೇಳಿದ್ದಾರೆ. ಪ್ರಕರಣದ ವಿಚಾರಣೆಯನ್ನು ಅವರು ಮೇ 20ಕ್ಕೆ ಮುಂದೂಡಿದರು.  

ಅಮೆರಿಕದ ಅಧಿಕಾರಿಗಳು ಅಸಾಂಜೆಗೆ ಚಿತ್ರಹಿಂಸೆ, ಹತ್ಯೆ ಒಳಗೊಂಡಂತೆ ಗರಿಷ್ಠ ಶಿಕ್ಷೆ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರ ಪರ ವಕೀಲ ಎಡ್ವರ್ಡ್‌ ಫಿಟ್ಜ್‌ಗೆರಾಲ್ಡ್‌ ಹೈಕೋರ್ಟ್‌ನಲ್ಲಿ ಫೆಬ್ರುವರಿಯಲ್ಲಿ ಪ್ರತಿಪಾದಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ ನ್ಯಾಯಯುತ ವಿಚಾರಣೆ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಅವರನ್ನು ಹಸ್ತಾಂತರಿಸಕೂಡದು ಎಂದು ಅಸಾಂಜೆ ಬೆಂಬಲಿಗರು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.