ಕೋರ್ಟ್ (ಪ್ರಾತಿನಿಧಿಕ ಚಿತ್ರ)
ಲಂಡನ್ : ಸಂಜಯ್ ಭಂಡಾರಿ ಹಸ್ತಾಂತರ ಕುರಿತು ಇಲ್ಲಿನ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅನುಮತಿ ಕೋರಿದ್ದ ಭಾರತ ಸರ್ಕಾರದ ಮನವಿಯನ್ನು ಬ್ರಿಟನ್‌ನ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿತು.
ಉದ್ಯಮಿ, ರಕ್ಷಣಾ ಕ್ಷೇತ್ರದ ಕನ್ಸಲ್ಟಂಟ್ ಆಗಿದ್ದ ಸಂಜಯ್ ಭಂಡಾರಿ ಅವರು ತೆರಿಗೆ ವಂಚನೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣ ಎದುರಿಸುತ್ತಿದ್ದು, ಭಾರತಕ್ಕೆ ಬೇಕಾಗಿದ್ದಾರೆ.
ವಿಚಾರಣೆ ನಡೆಸಿದ ರಾಯಲ್ ಕೋರ್ಟ್‌ನ ನ್ಯಾಯಮೂರ್ತಿ ಟಿಮೋತಿ ಹಾಲ್‌ರೊಯ್ಡ್ ಅವರು ಭಾರತ ಸರ್ಕಾರ ಕಳೆದ ತಿಂಗಳು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದರು.
ಮಾನವ ಹಕ್ಕುಗಳ ರಕ್ಷಣೆ ಆಧಾರದಲ್ಲಿ ಹಸ್ತಾಂತರ ಬೇಡ ಎಂದು ಪ್ರತಿಪಾದಿಸಿ, 62 ವರ್ಷದ ಉದ್ಯಮಿ ಈ ಹಿಂದೆ ಸಲ್ಲಿಸಿದ್ದ ಮನವಿಯನ್ನು ಈ ಹಿಂದೆ ಹೈಕೋರ್ಟ್ ಪುರಸ್ಕರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.