ಲಂಡನ್(ಪಿಟಿಐ): ಭಾರತ–ಇಂಗ್ಲೆಡ್ ನಡುವಿನ ದ್ವಿಪಕ್ಷೀಯ ಒಪ್ಪಂದವನ್ನು ಬಲಪಡಿಸಲು ಹಾಗೂ ಉಭಯ ದೇಶಗಳ ನಡುವೆ ನಡೆಯುತ್ತಿರುವ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಏಪ್ರಿಲ್ 22ರಂದು ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
ಜಾನ್ಸನ್ ಅವರಿಗೆ ಕೋವಿಡ್ ತಗಲಿದ್ದ ಕಾರಣ ಈ ಹಿಂದೆ ನಿಗದಿಯಾಗಿದ್ದ ಭಾರತದ ಪ್ರವಾಸ ರದ್ದಾಗಿತ್ತು. ಕಳೆದ ತಿಂಗಳು ಭಾರತ ಪ್ರವಾಸವನ್ನು ಬ್ರಿಟನ್ ಪ್ರಧಾನಿ ಕಚೇರಿ ದೃಢೀಕರಿಸದಿದ್ದರೂ, ಮೋದಿ–ಜಾನ್ಸನ್ ಅವರು ದೂರವಾಣಿ ಮೂಲಕ ಸಭೆ ನಡೆಸುವ ಬಗ್ಗೆ ಚರ್ಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.