ADVERTISEMENT

4 ವರ್ಷದ ಬಳಿಕ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಕೌಟುಂಬಿಕ ಪ್ರವಾಸ

ಪಿಟಿಐ
Published 31 ಜುಲೈ 2023, 16:31 IST
Last Updated 31 ಜುಲೈ 2023, 16:31 IST
ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌
ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌   

ಲಂಡನ್‌: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರು ನಾಲ್ಕು ವರ್ಷಗಳ ಬಳಿಕ ಪತ್ನಿ ಅಕ್ಷತಾ, ಇಬ್ಬರು ಹೆಣ್ಣು ಮಕ್ಕಳ ಜೊತೆಗೂಡಿ ಪ್ರವಾಸ ತೆರಳಿದ್ದಾರೆ ಎಂದು ಡೌನಿಂಗ್ ಸ್ಟ್ರೀಟ್ ಸೋಮವಾರ ಪ್ರಕಟಿಸಿದೆ. 

ಭದ್ರತಾ ಕಾರಣಗಳಿಗಾಗಿ ಯಾವ ಸ್ಥಳಕ್ಕೆ ಪ್ರವಾಸ ತೆರಳಿದ್ದಾರೆ ಎಂದು ಗೋಪ್ಯವಾಗಿ ಇರಿಸಲಾಗಿದೆ. ಒಂದು ವಾರ ಕಾಲ ಆಡಳಿತದ ನಿತ್ಯದ ಉಸ್ತುವಾರಿಯನ್ನು ಉಪ ಪ್ರಧಾನಿ ಒಲಿವರ್‌ ಡೌಡೆನ್‌ ನಿರ್ವಹಿಸುವರು ಎಂದು ಹೇಳಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT