ADVERTISEMENT

ಉಕ್ರೇನ್‌ ಮರುವಶಕ್ಕೆ ಪಡೆದ ಇಝಿಯಮ್‌ಗೆ ಝೆಲೆನ್‌ಸ್ಕಿ ಭೇಟಿ

ಏಜೆನ್ಸೀಸ್
Published 14 ಸೆಪ್ಟೆಂಬರ್ 2022, 15:24 IST
Last Updated 14 ಸೆಪ್ಟೆಂಬರ್ 2022, 15:24 IST
ಇಝಿಯಮ್‌ ಸಿಟಿ ಹಾಲ್‌ ಕಟ್ಟಡದ ಎದುರು ಉಕ್ರೇನ್ ಧ್ವಜವನ್ನು ಹಾರಿಸಿದ ನಂತರ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅಲ್ಲಿಂದ ನಿರ್ಗಮಿಸಿದರು –ಎಪಿ/ಪಿಟಿಐ ಚಿತ್ರ
ಇಝಿಯಮ್‌ ಸಿಟಿ ಹಾಲ್‌ ಕಟ್ಟಡದ ಎದುರು ಉಕ್ರೇನ್ ಧ್ವಜವನ್ನು ಹಾರಿಸಿದ ನಂತರ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅಲ್ಲಿಂದ ನಿರ್ಗಮಿಸಿದರು –ಎಪಿ/ಪಿಟಿಐ ಚಿತ್ರ   

ಇಝಿಯಮ್ (ಉಕ್ರೇನ್‌): ರಷ್ಯಾದಿಂದ ವಾಪಸ್‌ ಪಡೆದ ಇಝಿಯಮ್ ನಗರಕ್ಕೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಬುಧವಾರ ಭೇಟಿ ನೀಡಿ ಯೋಧರಿಗೆ ಧನ್ಯವಾದ ತಿಳಿಸಿದರು. ರಷ್ಯಾ ದಾಳಿಯಿಂದ ಹಾನಿಗೊಳಗಾದ ಸಿಟಿ ಹಾಲ್‌ ಕಟ್ಟಡದ ಎದುರು ಉಕ್ರೇನ್ ಧ್ವಜವನ್ನು ಹಾರಿಸಿ ಸಂಭ್ರಮಿಸಿದರು.

ಉಕ್ರೇನ್‌ ಸೇನೆ ಕಳೆದ ವಾರ ರಷ್ಯಾ ಪಡೆಗಳಿಗೆ ಪ್ರತಿರೋಧವನ್ನು ಒಡ್ಡಿ ಇಝಿಯಮ್‌ ನಗರವನ್ನು ಮತ್ತೆ ತಮ್ಮ ವಶಕ್ಕೆ ಪಡೆದುಕೊಂಡಿತ್ತು.

ಆದರೆ ಉಭಯ ದೇಶಗಳ ದಾಳಿಯ ಪರಿಣಾಮ ಇಝಿಯಮ್‌ನ ಬಹುತೇಕ ಧ್ವಂಸಗೊಂಡಿದೆ. ಅಪಾರ್ಟ್‌ಮೆಂಟ್‌ ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ, ಗುಂಡೇಟಿನಿಂದ ಹಾನಿಗೊಳಗಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.