ADVERTISEMENT

4 ದಿನಗಳ ಭೇಟಿಗಾಗಿ ನೇಪಾಳಕ್ಕೆ ಆಗಮಿಸಿದ ಯುಎನ್‌ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಅಕ್ಟೋಬರ್ 2023, 3:00 IST
Last Updated 29 ಅಕ್ಟೋಬರ್ 2023, 3:00 IST
<div class="paragraphs"><p>ನೇಪಾಳಕ್ಕೆ ಆಗಮಿಸಿದ&nbsp; ಆಂಟೋನಿಯೊ ಗುಟೆರೆಸ್ </p></div>

ನೇಪಾಳಕ್ಕೆ ಆಗಮಿಸಿದ  ಆಂಟೋನಿಯೊ ಗುಟೆರೆಸ್

   

(ಚಿತ್ರ ಕೃಪೆ– ಎಕ್ಸ್‌)

ಕಠ್ಮಂಡು(ನೇಪಾಳ): ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು 4 ದಿನಗಳ ಭೇಟಿಗಾಗಿ ಭಾನುವಾರ ಬೆಳಿಗ್ಗೆ ನೇಪಾಳದ ರಾಜಧಾನಿ ಕಠ್ಮಂಡುವಿಗೆ ಆಗಮಿಸಿದರು.

ADVERTISEMENT

ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರ ಆಹ್ವಾನದ ಮೇರೆಗೆ ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಗುಟೆರಸ್ ಅವರನ್ನು ನೇಪಾಳ ವಿದೇಶಾಂಗ ಸಚಿವ ಎನ್‌.ಪಿ ಸೌದ್ ಮತ್ತು ಇತರ ಅಧಿಕಾರಿಗಳು ಸ್ವಾಗತಿಸಿದರು. ಜನವರಿ 1, 2017ರಂದು ಅಧಿಕಾರ ವಹಿಸಿಕೊಂಡ ನಂತರ ನೇಪಾಳಕ್ಕೆ ಯುಎನ್ ಮುಖ್ಯಸ್ಥರ ಮೊದಲ ಭೇಟಿಯಾಗಿದೆ.

ಆಂಟೋನಿಯೊ ಗುಟೆರೆಸ್ ಅವರು ಅ.31ರಂದು ಫೆಡರಲ್ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ನೇಪಾಳದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಬಳಿಕ ಅವರು, ಅನ್ನಪೂರ್ಣ ಬೇಸ್ ಕ್ಯಾಂಪ್ ಪ್ರದೇಶ ಮತ್ತು ಮೌಂಟ್ ಎವರೆಸ್ಟ್‌ ಗೇಟ್‌ವೇ ಲುಕ್ಲಾಗೆ ಭೇಟಿ ನೀಡಲಿದ್ದಾರೆ. ಅಲ್ಲಿನ ಸಮುದಾಯಗಳೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಗೌತಮ ಬುದ್ಧನ ಜನ್ಮಸ್ಥಳ ಲುಂಬಿನಿಗೆ ಭೇಟಿ ನೀಡಲಿದ್ದಾರೆ.

ಭಾನುವಾರ ಆಂಟೋನಿಯೊ ಗುಟೆರಸ್ ನೇಪಾಳ ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರನ್ನು ಭೇಟಿ ಮಾಡಲಿದ್ದಾರೆ. ಬಳಿಕ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಮತ್ತು ಇತರ ಗಣ್ಯರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.