ADVERTISEMENT

ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲು ಸಿದ್ಧ: ಗುಟೆರಸ್

ಏಜೆನ್ಸೀಸ್
Published 12 ಜನವರಿ 2021, 6:12 IST
Last Updated 12 ಜನವರಿ 2021, 6:12 IST
ಆಂಟೊನಿಯೊ ಗುಟೆರಸ್
ಆಂಟೊನಿಯೊ ಗುಟೆರಸ್   

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಎರಡನೇ ಅವಧಿಯಲ್ಲೂ ಮುಂದುವರಿಯುವುದಾಗಿ ಆಂಟೊನಿಯೊ ಗುಟೆರಸ್ ಅವರು ಘೋಷಿಸಿದ್ದಾರೆ.

ಸಾಮಾನ್ಯ ಸಭೆಯ ಅಧ್ಯಕ್ಷ ವೊಲ್ಕಾನ್ ಬೊಜ್ಕಿರ್ ಅವರಿಗೆ ಬರೆದ ಪತ್ರದಲ್ಲಿ ಈ ಬಗ್ಗೆ ತಿಳಿಸಿರುವುದಾಗಿ ಹೇಳಿದ್ದಾರೆ.

‘ಇದು ನನಗೆ ಸಿಗುವ ಗೌರವ ಎಂದು ಭಾವಿಸುತ್ತೇನೆ. ಮುಂದಿನ ಅವಧಿಯಲ್ಲೂ ವಿಶ್ವಸಂಸ್ಥೆಯ ಉದ್ದೇಶಗಳನ್ನು ಪೂರೈಸಲು ದುಡಿಯುತ್ತೇನೆ’ ಎಂದು ‍ಪತ್ರದಲ್ಲಿ ಹೇಳಿದ್ದಾರೆ.

ADVERTISEMENT

‘ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳ ಇಚ್ಛೆಯಂತೆ ಎರಡನೇ ಅವಧಿಯಲ್ಲೂ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲು ಸಿದ್ಧನಿದ್ಧೇನೆ’ ಎಂದು ಆಂಟೊನಿಯಾ ಅವರು ತಿಳಿಸಿದರು.

‘ಎರಡನೇ ಅವಧಿಯಲ್ಲೂ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯುವ ಕುರಿತಾಗಿ ಅಭಿ‍ಪ್ರಾಯ ತಿಳಿಸುವಂತೆ ಬೊಜ್ಕಿರ್‌ ಅವರು ಗುಟರೆಸ್‌ಗೆ ಪತ್ರ ಬರೆದಿದ್ದರು ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡುಜಾರಿಕ್ ಅವರು ಮಾಹಿತಿ ನೀಡಿದರು.

2017ರ ಜನವರಿ 1 ರಂದು ಆಂಟೊನಿಯೊ ಗುಟೆರಸ್‌ ಅವರು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಮಹಾ ಪ್ರಧಾನ ಕಾರ್ಯದರ್ಶಿಯವರ ಸ್ಥಾನದ ಅವಧಿ ಐದು ವರ್ಷಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.