ADVERTISEMENT

ಪ್ರವಾಹ ಪೀಡಿತ ಪಾಕ್‌ಗೆ ಗುಟೆರಸ್‌ ಭೇಟಿ: ನೆರವಿಗೆ ಮನವಿ

ಪಿಟಿಐ
Published 9 ಸೆಪ್ಟೆಂಬರ್ 2022, 14:43 IST
Last Updated 9 ಸೆಪ್ಟೆಂಬರ್ 2022, 14:43 IST
ಆಂಟೋನಿಯೊ ಗುಟೆರಸ್
ಆಂಟೋನಿಯೊ ಗುಟೆರಸ್   

ಇಸ್ಲಾಮಾಬಾದ್: ಪ್ರವಾಹ ಪೀಡಿತ ಪಾಕಿಸ್ತಾನಕ್ಕೆ ಶುಕ್ರವಾರ ಎರಡು ದಿನಗಳ ಭೇಟಿ ನೀಡಿದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್, ಸಂಕಷ್ಟದಲ್ಲಿರುವ ದೇಶಕ್ಕೆ ಸಹಾಯ ಮಾಡುವಂತೆ ವಿಶ್ವಕ್ಕೆ ಮನವಿ ಮಾಡಿದರು.

ಪ್ರವಾಹದಿಂದಾಗಿ ಸಾವಿರಾರು ಜನರು ಮೃತಪಟ್ಟಿದ್ದು, 33 ದಶಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ.

ಜೂನ್ ನಿಂದ ಆರಂಭವಾದ ಮಳೆ ಮತ್ತು ಪ್ರವಾಹದಿಂದಾಗಿ ದೇಶದಲ್ಲಿ ಸುಮಾರು 1,350 ಜನರು ಮೃತಪಟ್ಟಿದ್ದಾರೆ. ಪಾಕಿಸ್ತಾನದ ಮೂರನೇ ಒಂದು ಭಾಗ ಮಳೆಯಿಂದ ಮುಳುಗಿತ್ತು. ಸಂತ್ರಸ್ತರ ಸಹಾಯಕ್ಕಾಗಿ ₹1272 ಕೋಟಿ ತುರ್ತು ನಿಧಿ ನೀಡುವಂತೆ ಪಾಕಿಸ್ತಾನ ಮನವಿ ಮಾಡಿದ ಎರಡು ವಾರಗಳ ನಂತರ ಅವರು ಭೇಟಿ ನೀಡಿದ್ದಾರೆ.

ADVERTISEMENT

ಪಾಕಿಸ್ತಾನದ 52 ಲಕ್ಷ ಜನರಿಗೆ ಆಹಾರ, ನೀರು, ನೈರ್ಮಲ್ಯ, ತುರ್ತು ಶಿಕ್ಷಣ, ರಕ್ಷಣೆ ಮತ್ತು ಆರೋಗ್ಯ ವ್ಯವಸ್ಥೆ ಕಲ್ಪಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.