ADVERTISEMENT

ಕೋವಿಡ್‌ ಸಂದರ್ಭದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಿದ ಭಾರತ: ಗುಟೆರಸ್‌ ಶ್ಲಾಘನೆ

ಪಿಟಿಐ
Published 21 ಫೆಬ್ರುವರಿ 2021, 5:48 IST
Last Updated 21 ಫೆಬ್ರುವರಿ 2021, 5:48 IST
ಆಂಟೊನಿಯೊ ಗುಟೆರಸ್
ಆಂಟೊನಿಯೊ ಗುಟೆರಸ್   

ವಿಶ್ವಸಂಸ್ಥೆ: ಕೊರೊನಾ ವೈರಸ್‌ ವಿರುದ್ಧ ಜಾಗತಿಕ ಹೋರಾಟದಲ್ಲಿ ಭಾರತದ ನಾಯಕತ್ವ ಮತ್ತು ಜಾಗತಿಕ ಮಾರುಕಟ್ಟೆಗೆ ಅತ್ಯಗತ್ಯವಾದ ಕೋವಿಡ್‌ ಲಸಿಕೆ ಪೂರೈಕೆಗಾಗಿ ಭಾರತ ಮಾಡುತ್ತಿರುವ ಪ್ರಯತ್ನಗಳಿಗೆ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೊನಿಯೊ ಗುಟೆರಸ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಶನಿವಾರ ಟ್ವೀಟ್‌ ಮಾಡಿರುವ ವಿಶ್ವಸಂಸ್ಥೆಯ ಭಾರತದ ರಾಯಭಾರಿ ಟಿ.ಎಸ್‌ ತಿರುಮೂರ್ತಿ ಅವರು,‘ ವಿಶ್ವಸಂಸ್ಥೆಗೆ ಕೋವಿಡ್‌ ಲಸಿಕೆಯ 200,000 ಡೋಸ್‌ ನೀಡಿರುವ ಭಾರತದ ನಡೆಗೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಬಗ್ಗೆ ಫ್ರೆಬುವರಿ 7 ರಂದು ಆಂಟೊನಿಯೊ ಗುಟೆರಸ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ಗೆ ಪತ್ರ ಬರೆದಿದ್ದು, ಪತ್ರದಲ್ಲಿ ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ’ ಎಂದು ಅವರು ತಿಳಿಸಿದರು.

‘ಭಾರತವು ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ. ಈ ಸಮಯದಲ್ಲಿ ಭಾರತವು 150 ಕ್ಕೂ ಹೆಚ್ಚು ದೇಶಗಳಿಗೆ ಅತ್ಯಗತ್ಯವಾದ ಔಷಧಿಗಳು, ವೆಂಟಿಲೇಟರ್‌, ಪಿಪಿಇ ಕಿಟ್‌ಗಳನ್ನು ಪೂರೈಸಿದೆ. ವಿಶ್ವ ಆರೋಗ್ಯ ಸಂಸ್ಥೆಯು ತುರ್ತು ಬಳಕೆಗೆ ಅನುಮೋದನೆ ನೀಡಿರುವ ಎರಡು ಲಸಿಕೆಗಳಲ್ಲಿ ಒಂದನ್ನು ಭಾರತ ಅಭಿವೃದ್ಧಿ ಪಡಿಸಿ, ಉತ್ಪಾದಿಸುತ್ತಿದೆ ಹಾಗೂ ಜಾಗತಿಕ ಮಾರುಕಟ್ಟೆಗೂ ಪೂರೈಕೆ ಮಾಡುತ್ತಿದೆ ಎಂದು ಗುಟೆರಸ್‌ ಹೇಳಿದ್ದಾರೆ’ ಎಂದು ತಿರುಮೂರ್ತಿ ಟ್ವಿಟರ್‌ನಲ್ಲಿ ತಿಳಿಸಿದ್ಧಾರೆ.

ADVERTISEMENT

ಭಾರತವು ಈಚೆಗೆ ಕೋವಿಡ್‌ ಲಸಿಕೆಯ 200,000 ಡೋಸ್‌ ಅನ್ನು ವಿಶ್ವಸಂಸ್ಥೆಗೆ ಕೊಡುಗೆ ರೂಪದಲ್ಲಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.