ADVERTISEMENT

ಲಿಬಿಯಾ: ವಲಸಿಗರ ದೋಣಿ ಮಗುಚಿ 17 ಮಂದಿ ಸಾವು

ಏಜೆನ್ಸೀಸ್
Published 24 ಆಗಸ್ಟ್ 2021, 2:18 IST
Last Updated 24 ಆಗಸ್ಟ್ 2021, 2:18 IST
ಸಾಂದರ್ಭಿಕ ಚಿತ್ರ (ಐಸ್ಟಾಕ್)
ಸಾಂದರ್ಭಿಕ ಚಿತ್ರ (ಐಸ್ಟಾಕ್)   

ಕೈರೊ: ಲಿಬಿಯಾದಲ್ಲಿ ಹತ್ತಾರು ವಲಸಿಗರನ್ನು ಒಳಗೊಂಡಿದ್ದ ಬೋಟ್‌ ಮಗುಚಿ ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ವಲಸೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಶ್ರಯ ಅರಸಿ ಯುರೋಪ್‌ಗೆ ತೆರಳುತ್ತಿದ್ದವರಿದ್ದ ಬೋಟ್ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿದೆ. ಲಿಬಿಯಾದ ಜುವಾರಾ ನಗರದ ಬಳಿ ದುರಂತ ಸಂಭವಿಸಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಬೋಟ್‌ನಲ್ಲಿ ಸುಮಾರು 70 ವಲಸಿಗರಿದ್ದರು. 51 ಮಂದಿಯನ್ನು ಲಿಬಿಯಾದ ಕರಾವಳಿ ರಕ್ಷಣಾ ಪಡೆ ರಕ್ಷಿಸಿದೆ. ಒಂದು ಮೃತದೇಹ ಪತ್ತೆಯಾಗಿದೆ. ಕಣ್ಮರೆಯಾಗಿರುವವರಿಗಾಗಿ ಶೋಧ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಕಳೆದ ತಿಂಗಳಷ್ಟೇ ಲಿಬಿಯಾದಲ್ಲಿ ನಡೆದಿದ್ದ ಎರಡು ಬೋಟ್ ದುರಂತಗಳಲ್ಲಿ 80 ವಲಸಿಗರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.