ADVERTISEMENT

ಯುಎನ್‌ಎಸ್‌ಸಿ: ಭಾರತದ ಸಿದ್ಧತೆಗೆ ಪ್ರಶಂಸೆ

ಪಿಟಿಐ
Published 22 ಜುಲೈ 2021, 5:49 IST
Last Updated 22 ಜುಲೈ 2021, 5:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಶ್ವಸಂಸ್ಥೆ: ಮುಂದಿನ ತಿಂಗಳು(ಆಗಸ್ಟ್‌) ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಅಲಂಕರಿಸಲಿರುವ ಭಾರತ ಕೈಗೊಂಡಿರುವ ಸಿದ್ಧತಾ ಕಾರ್ಯಗಳ ಬಗ್ಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ವೊಲ್ಕನ್‌ ಬೋಜ್ಕಿರ್‌ ಪ್ರಶಂಸಿಸಿದ್ದಾರೆ.

ವೊಲ್ಕನ್‌ ಬೋಜ್ಕಿರ್‌ ಅವರು ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಅವರೊಂದಿಗೆ ಬುಧವಾರ ವೈಯಕ್ತಿಕವಾಗಿ ಸಮನ್ವಯ ಸಭೆ ನಡೆಸಿದರು. ಆಗಸ್ಟ್‌ನಲ್ಲಿ ನಡೆಯಲಿರುವ ಭದ್ರತಾ ಮಂಡಳಿ ಸಭೆಯ ಅಧ್ಯಕ್ಷತೆಯನ್ನುತಿರುಮೂರ್ತಿ ಅವರು ವಹಿಸಲಿದ್ದಾರೆ.

ತಿರುಮೂರ್ತಿಯವರು, ಮಂಡಳಿಯ ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ ಭಾರತದ ಕೈಗೊಳ್ಳಲಿರುವ ಕಾರ್ಯಕ್ರಮಗಳನ್ನು ಬೋಜ್ಕಿರ್‌ಗೆ ವಿವರಿಸಿದರು. ಇದೇ ವೇಳೆ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯ 76 ನೇ ಅಧಿವೇಶನದ ಸಿದ್ಧತೆ ಕುರಿತು ಕೂಡ ತಿರುಮೂರ್ತಿ ಮತ್ತು ಬೋಜ್ಕಿರ್‌ ಚರ್ಚಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.