ADVERTISEMENT

ಕರಾಚಿ: ಮೊಹಂಜೊ–ದಾರೊ ಬಳಿ ಬುದ್ಧ ಪೆಂಡೆಂಟ್‌ ಪತ್ತೆ

ಪಿಟಿಐ
Published 5 ಆಗಸ್ಟ್ 2022, 14:00 IST
Last Updated 5 ಆಗಸ್ಟ್ 2022, 14:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕರಾಚಿ: ನಿರಂತರ ಮಳೆಯ ಬಳಿಕ ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಮೊಹೆಂಜೊ–ದಾರೊ ಸಮೀಪದಲ್ಲಿ ಪುರಾತನ ಕಾಲದ ವಿಶಿಷ್ಟವಾದ ‘ಬುದ್ಧ ಪೆಂಡೆಂಟ್‌’ ಪತ್ತೆಯಾಗಿದೆ ಎಂದು ಮಾಧ್ಯಮವೊಂದು ಶುಕ್ರವಾರ ವರದಿ ಮಾಡಿದೆ.

‘ಜಡಿ ಮಳೆಯಿಂದಾಗಿ ಸೃಷ್ಟಿಯಾದ ಗುಂಡಿಯಲ್ಲಿ ಪುರಾತನ ವಸ್ತುವೊಂದು ಪತ್ತೆಯಾಗಿತ್ತು. ಕೂಡಲೇ ಪುರಾತನ ವಸ್ತು ಸಂರಕ್ಷಕ ಅಧಿಕಾರಿ ಸವೀದ್‌ ಸಂಗಹ್‌ ಅವರಿಗೆ ಮಾಹಿತಿ ನೀಡಿದೆ’ ಎಂದು ಇರ್ಶಾದ್‌ ಅಹ್ಮದ್‌ ಸೋಲಂಗಿ ತಿಳಿಸಿದ್ದಾರೆ.

ಪುರಾತತ್ವ ಇಲಾಖೆಯ ಮಾಜಿ ಮುಖ್ಯ ಎಂಜಿಯರ್‌ ಮೋಹನ್‌ ಲಾಲ್‌ ಅವರು ಅದನ್ನು ಪರಿಶೀಲಿಸಿ, ಇದು ಬುದ್ಧ ಪೆಂಡೆಂಟ್‌ ಎಂದು ಗುರುತಿಸಿದ್ದಾರೆ. ಜೊತೆಗೆ ಇದು ವಿಶಿಷ್ಟವಾದ ಪುರಾತನ ವಸ್ತು ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.