ADVERTISEMENT

ಯುನೈಟೆಡ್ ಹೆಲ್ತ್‌‌ಕೇರ್ ಸಂಸ್ಥೆಯ ಸಿಇಒ ಹತ್ಯೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2024, 15:49 IST
Last Updated 4 ಡಿಸೆಂಬರ್ 2024, 15:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್: ಯುನೈಟೆಡ್ ಹೆಲ್ತ್‌‌ಕೇರ್ ಸಂಸ್ಥೆಯ ಸಿಇಒ ಬ್ರಯಾನ್ ಥಾಂಪ‍್ಸನ್ ಅವರನ್ನು ಮ್ಯಾನ್‌ಹಟನ್ ನಗರದ ಹಿಲ್ಟನ್‌ ಹೋಟೆಲ್‌ ಬಳಿ ಬುಧವಾರ ಬೆಳಿಗ್ಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಹಂತಕ ತಲೆಮರೆಸಿಕೊಂಡಿದ್ದಾನೆ. ಬ್ರಯಾನ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಬದುಕುಳಿಯಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಹೋಟೆಲ್‌ನಲ್ಲಿ ಸಂಸ್ಥೆಯ ವಾರ್ಷಿಕ ಸಭೆ ನಡೆಯುತ್ತಿತ್ತು. ಆರೋಗ್ಯ ಕ್ಷೇತ್ರದ ಪ್ರಮುಖ ಸಂಸ್ಥೆಯಾಗಿರುವ ಯುನೈಟೆಡ್‌ ಹೆಲ್ತ್‌ಕೇರ್‌ನಲ್ಲಿ ಮೂರು ವರ್ಷಗಳಿಂದ ಅವರು ಸಿಇಒ ಆಗಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.