ADVERTISEMENT

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಂದೂಗಳ ಪಾತ್ರ ನಿರ್ಣಾಯಕ:ರಾಜಾ ಕೃಷ್ಣಮೂರ್ತಿ

ಪಿಟಿಐ
Published 4 ಸೆಪ್ಟೆಂಬರ್ 2020, 7:09 IST
Last Updated 4 ಸೆಪ್ಟೆಂಬರ್ 2020, 7:09 IST
ರಾಜಾ ಕೃಷ್ಣಮೂರ್ತಿ
ರಾಜಾ ಕೃಷ್ಣಮೂರ್ತಿ   

ವಾಷಿಂಗ್ಟನ್‌:ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ 20 ಲಕ್ಷ ಹಿಂದೂಗಳು ನಿರ್ಣಾಯಕ ಪಾತ್ರವಹಿಸಲಿದ್ದಾರೆ ಎಂದು ಅಮೆರಿಕದಲ್ಲಿರುವ ಭಾರತ ಸಂಜಾತ ಸಂಸದ ರಾಜಾ ಕೃಷ್ಣಮೂರ್ತಿ ಹೇಳಿದ್ದಾರೆ.

‘ಹಿಂದೂ ಅಮೆರಿಕನ್ಸ್‌ ಫಾರ್‌ ಬೈಡನ್‌‌’ ಎಂಬ ವರ್ಚುವಲ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷ್ಣಮೂರ್ತಿ ಅವರು, ನ.3 ರಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ವೇಳೆ ಡೆಮಾಕ್ರಟಿಕ್‌‌ ಪಕ್ಷದ ಅಧ್ಯಕ್ಷ ಸ್ಥಾನದ‌ ಅಭ್ಯರ್ಥಿ ಜೋ ಬೈಡನ್‌ ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರ ಪರವಾಗಿ ಮತ ಚಲಾಯಿಸಿ ಎಂದು ಅವರು ಕೋರಿದರು.

‘ವಸುದೈವ ಕುಟುಂಬಕಂ’ ಎಂಬ ಹಿಂದೂಗಳ ಪ್ರಮುಖ ಚಿಂತನೆಗಾಗಿ ಜೋ ಬೈಡನ್‌ ಅವರನ್ನು ಆರಿಸುವುದು ಬಹಳ ಮುಖ್ಯವಾಗಿದೆ. ಎಲ್ಲರೂ ಸಮಾನರು ಹಾಗೂ ಎಲ್ಲರನ್ನು ಗೌರವದಿಂದ ನೋಡಬೇಕು ಎಂಬ ಮೌಲ್ಯದ ಮೇಲೆ ನಮ್ಮ ನಂಬಿಕೆ ಇದೆ. ಹಾಗಾಗಿ ಬೈಡನ್‌ ಅವರನ್ನು ಅಧ್ಯಕ್ಷರಾಗಿ ಆರಿಸಬೇಕು’ ಎಂದು ಕೃಷ್ಣಮೂರ್ತಿ ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.