ADVERTISEMENT

20 ದೇಶಗಳ ಮೇಲೆ ನಿರ್ಬಂಧ ಹೇರಿದ ಅಮೆರಿಕ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 16:12 IST
Last Updated 17 ಡಿಸೆಂಬರ್ 2025, 16:12 IST
<div class="paragraphs"><p>ಅಮೆರಿಕ</p></div>

ಅಮೆರಿಕ

   

ನ್ಯೂಯಾರ್ಕ್‌/ವಾಷಿಂಗ್ಟನ್‌ (ಪಿಟಿಐ): ಪ್ಯಾಲೆಸ್ಟೀನ್‌ ಸರ್ಕಾರ ನೀಡುವ ಪಾಸ್‌ಪೋರ್ಟ್‌ ಹೊಂದಿರುವ ವ್ಯಕ್ತಿಗಳಿಗೆ ಮತ್ತು ಇತರೆ 20 ದೇಶಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಆದೇಶಕ್ಕೆ ಮಂಗಳವಾರ ಸಹಿ ಹಾಕಿದ್ದಾರೆ. ಅಮೆರಿಕ ನಿರ್ಬಂಧ ಹೇರಿರುವ ದೇಶಗಳ ಪಟ್ಟಿಗೆ ಈ 20 ದೇಶಗಳು ಹೊಸ ಸೇರ್ಪಡೆಯಾಗಿವೆ.

‘ನಿರ್ಬಂಧ ಹೇರಲಾಗಿರುವ ದೇಶಗಳು ತಮ್ಮ ಮಾಹಿತಿಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ನಿರಾಕರಿಸಿವೆ. ಈ ದೇಶಗಳ ಪ್ರಜೆಗಳು ಯಾವ ರೀತಿಯ ಬೆದರಿಕೆ ಒಡ್ಡುತ್ತಾರೆ ಎಂದು ನಮಗೆ ತಿಳಿದಿಲ್ಲ. ಇದು ಅಮೆರಿಕದ ಭದ್ರತೆ ಮತ್ತು ಸಾರ್ವಜನಿಕರ ಸುರಕ್ಷತೆಗೆ ಮಾರಕವಾಗಲಿದೆ. ಆದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಆದೇಶದಲ್ಲಿ ಹೇಳಲಾಗಿದೆ.

ADVERTISEMENT

‘ಅಮೆರಿಕವು ಗುರುತಿಸಿರುವ ಭಯೋತ್ಪಾದಕ ಗುಂಪುಗಳು ವೆಸ್ಟ್‌ ಬ್ಯಾಂಕ್‌ ಮತ್ತು ಗಾಜಾ ಪಟ್ಟಿಯಲ್ಲಿ ಸಕ್ರಿಯವಾಗಿವೆ. ಇವರು ಅಮೆರಿಕ ಪ್ರಜೆಗಳನ್ನು ಹತ್ಯೆ ಮಾಡಿದ್ದಾರೆ. ಈ ಪ್ರದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದ ಇಲ್ಲಿನ ಜನರನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಲು ಪ್ಯಾಲೆಸ್ಟೀನ್‌ ಸರ್ಕಾರಕ್ಕೇ ಸಾಧ್ಯವಾಗುತ್ತಿಲ್ಲ ಮತ್ತು ಈ ಪ್ರದೇಶಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣವಿಲ್ಲ’ ಎಂದು ಹೇಳಲಾಗಿದೆ.

ಅಂಗೋಲಾ, ಆಂಟಿಗುವಾ ಮತ್ತು ಬಾರ್ಬುಡಾ, ಬೆನಿನ್‌, ಕೊಟ್‌–ಡಿ ಉವಾ, ಡೊಮಿನಿಕಾ, ಗಬಾನ್‌, ಗಾಂಬಿಯಾ, ಮಾವಿ, ಮೌರಿಟೇನಿಯಾ, ನೈಜೀರಿಯಾ, ಸೆನೆಗಲ್‌, ತಾಂಜಾನಿಯಾ, ಟೊಂಗಾ, ಜಾಂಬಿಯಾ, ಜಿಂಬಾಬ್ವೆ ದೇಶಗಳ ಪ್ರಜೆಗಳ ಮೇಲೆ ಭಾಗಶಃ ನಿರ್ಬಂಧ ವಿಧಿಸಲಾಗಿದೆ. ಬುರ್ಖಿನಾ ಫಾಸೊ, ಮಾಲಿ, ನೈಜರ್‌, ದಕ್ಷಿಣ ಸುಡಾನ್‌ ಮತ್ತು ಸಿರಿಯಾ ದೇಶಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.