ADVERTISEMENT

ಡಬ್ಲುಎಚ್‌ಒದಿಂದ ಸಂಪೂರ್ಣ ಹೊರ ನಡೆದ ಅಮೆರಿಕ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 16:07 IST
Last Updated 23 ಜನವರಿ 2026, 16:07 IST
-
-   

ನ್ಯೂಯಾರ್ಕ್: ವಿಶ್ವ ಆರೋಗ್ಯ ಸಂಸ್ಥೆಯಿಂದ(ಡಬ್ಲುಎಚ್‌ಒ) ಹೊರಬರುವ ಪ್ರಕ್ರಿಯೆಯನ್ನು ಅಮೆರಿಕ ಪೂರ್ಣಗೊಳಿಸಿದೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ಅವರು ಕಳೆದ ವರ್ಷ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವೇಳೆ, ‘ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಹೊಂದಿರುವ 78 ವರ್ಷಗಳ ನಂಟನ್ನು ಕೊನೆಗೊಳಿಸಲಿದೆ’ ಎಂದು ಘೋಷಿಸಿದ್ದರು. ಅದು, ಈಗ ಕಾರ್ಯಗತಗೊಂಡಂತಾಗಿದೆ.

ಸಂಸ್ಥೆಗೆ ಅಮೆರಿಕ ತನ್ನ ಪಾಲಿನ ವಂತಿಗೆಯನ್ನು ಬಾಕಿ ಉಳಿಸಿಕೊಂಡಿದೆ. ಈ ಮೊತ್ತ 13 ಕೋಟಿ ಡಾಲರ್‌ಗೂ (ಅಂದಾಜು ₹1,200 ಕೋಟಿ) ಹೆಚ್ಚು ಎಂದು ಡಬ್ಲುಎಚ್‌ಒ ಹೇಳಿದೆ.

ADVERTISEMENT

‘ಈ ಬೆಳವಣಿಗೆ ಹಲವು ಸಮಸ್ಯೆಗಳಿಗೆ ಕಾರಣವಾಗಲಿದೆ. ವಿವಿಧ ದೇಶಗಳಲ್ಲಿ ಕಂಡುಬರುವ ಸೋಂಕು/ರೋಗಗಳ ಕುರಿತು ಅಧ್ಯಯನ ಕೈಗೊಳ್ಳಲು, ಔಷಧಿ/ಲಸಿಕೆ ಅಭಿವೃದ್ಧಿಪಡಿಸುವುದಕ್ಕೆ ಅಮೆರಿಕದ ವಿಜ್ಞಾನಿಗಳಿಗೆ ಹಾಗೂ ಔಷಧ ಕಂಪನಿಗಳಿಗೆ ಕಷ್ಟವಾಗಲಿದೆ’ ಎಂದು ಜಾರ್ಜ್‌ಟೌನ್‌ ವಿಶ್ವವಿದ್ಯಾಲಯದ ಸಾರ್ಜನಿಕ ಆರೋಗ್ಯ ಕಾನೂನು ತಜ್ಞ ಲಾರೆನ್ಸ್‌ ಗಾಸ್ಟಿನ್‌ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್‌ ಅವರ ಈ ನಡೆಯು ನನ್ನ ಜೀವಮಾನದಲ್ಲಿ ನಾನು ನೋಡಿರುವಂತೆ ಅಮೆರಿಕದ ಅಧ್ಯಕ್ಷರೊಬ್ಬರು ಕೈಗೊಂಡಿರುವ ಅತ್ಯಂತ ವಿನಾಶಕಾರಿ ನಿರ್ಧಾರವಾಗಿದೆ
ಲಾರೆನ್ಸ್‌ ಗಾಸ್ಟಿನ್ ಜಾರ್ಜ್‌ಟೌನ್‌ ವಿ.ವಿಯ ಕಾನೂನು ತಜ್ಞ

ಪ್ರಮುಖ ಅಂಶಗಳು

* ಡಬ್ಲುಎಚ್‌ಒ ಸದಸ್ಯ ರಾಷ್ಟ್ರವಾಗಿ ಅಮೆರಿಕ ವರ್ಷಕ್ಕೆ ಸರಾಸರಿ 11 ಕೋಟಿ ಡಾಲರ್‌(ಅಂದಾಜು ₹ 1  ಸಾವಿರ ಕೋಟಿ) ವಂತಿಗೆ ನೀಡುತ್ತದೆ

* ಜಾಗತಿಕ ಆರೋಗ್ಯ ಬಿಕ್ಕಟ್ಟು ಹಾಗೂ ಕೋವಿಡ್‌–19 ಪಿಡುಗು ನಿರ್ವಹಣೆಯಲ್ಲಿ ವಿಫಲವಾಗಿದ್ದರಿಂದ ಡಬ್ಲುಎಚ್‌ಒದಿಂದ ಹೊರ ನಡೆಯುವುದಾಗಿ ಟ್ರಂಪ್‌ ಕಳೆದ ವರ್ಷ ಹೇಳಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.