ADVERTISEMENT

ಮ್ಯಾನ್ಮಾರ್: ಆಂಗ್ ಸಾನ್‌ ಸೂಕಿ ನೇತೃತ್ವದ ಪಕ್ಷ ವಿಸರ್ಜನೆಗೆ ಖಂಡನೆ

ಏಜೆನ್ಸೀಸ್
Published 30 ಮಾರ್ಚ್ 2023, 12:28 IST
Last Updated 30 ಮಾರ್ಚ್ 2023, 12:28 IST
ಆಂಗ್ ಸಾನ್‌ ಸೂಕಿ 
ಆಂಗ್ ಸಾನ್‌ ಸೂಕಿ    

ವಾಷಿಂಗ್ಟನ್‌: ಮ್ಯಾನ್ಮಾರ್‌ನಲ್ಲಿ ಬಂಧಿತ ನಾಯಕಿ ಆಂಗ್ ಸಾನ್‌ ಸೂಕಿ ಅವರ ನೇತೃತ್ವದ ರಾಜಕೀಯ ಪಕ್ಷವನ್ನು ವಿಸರ್ಜಿಸಿರುವ ಸೇನೆ ನೇತೃತ್ವದ ಸರ್ಕಾರದ ಕ್ರಮವನ್ನು ಅಮೆರಿಕ ಖಂಡಿಸಿದೆ.

ಈ ಬೆಳವಣಿಗೆಯು ಮ್ಯಾನ್ಮಾರ್‌ನಲ್ಲಿ ಇನ್ನಷ್ಟು ಅಸ್ಥಿರತೆಗೆ ಕಾರಣವಾಗಲಿದೆ ಎಂದೂ ಹೇಳಿದೆ. ಸೇನೆ ರೂಪಿಸಿದ ಕಾಯ್ದೆಯಡಿ ನೋಂದಣಿಯಾಗದ ಕಾರಣ ಪಕ್ಷವನ್ನು ವಿಸರ್ಜಿಸಲಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿತ್ತು.

ಸೂಕಿ ನೇತೃತ್ವದ ಚುನಾಯಿತ ಸರ್ಕಾರ ಪದಚ್ಯುತಗೊಳಿಸಿ 2021ರ ಫೆಬ್ರುವರಿಯಲ್ಲಿ ಸೇನೆ ಅಧಿಕಾರ ಹಿಡಿದಿತ್ತು. ಚುನಾವಣೆ ಹೊತ್ತಿನಲ್ಲಿ ವಿರೋಧಿಗಳನ್ನು ಹತ್ತಿಕ್ಕಲು ಸೇನಾ ಆಡಳಿತ ಈ ಕ್ರಮವಹಿಸಿದೆ ಎಂದು ಹೇಳಲಾಗಿದೆ.

ADVERTISEMENT

ನ್ಯಾಷನಲ್‌ ಲೀಗ್ ಫಾರ್‌ ಡೆಮಾಕ್ರಸಿ ಸೇರಿದಂತೆ 40 ಪಕ್ಷಗಳನ್ನು ವಿಸರ್ಜಿಸುವ ಮ್ಯಾನ್ಮಾರ್‌ನ ಸೇನಾ ಆಡಳಿತದ ಕ್ರಮವನ್ನು ಅಮೆರಿಕ ಖಂಡಿಸಲಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.