ADVERTISEMENT

ಸ್ಯಾನ್‌ ಫ್ರಾನ್ಸಿಸ್ಕೊ ಕಾನ್ಸುಲೇಟ್‌ ಕಚೇರಿ ಮೇಲೆ ದಾಳಿ: ಅಮೆರಿಕ ಖಂಡನೆ

ಪಿಟಿಐ
Published 21 ಮಾರ್ಚ್ 2023, 14:21 IST
Last Updated 21 ಮಾರ್ಚ್ 2023, 14:21 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌ (ಪಿಟಿಐ): ಖಾಲಿಸ್ತಾನ ಪರ ಬೆಂಬಲಿಗರು ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿರುವ ಭಾರತದ ಕಾನ್ಸುಲೇಟ್‌ ಕಚೇರಿ ಮೇಲೆ ದಾಳಿ ನಡೆಸಿರುವುದನ್ನು ಅಮೆರಿಕ ಬಲವಾಗಿ ಖಂಡಿಸಿದೆ.

‘ಘಟನೆಯು ಖಂಡಿತ ಸ್ವೀಕಾರಾರ್ಹ ಅಲ್ಲವೇ ಅಲ್ಲ. ರಾಜತಾಂತ್ರಿಕ ಅಧಿಕಾರಿಗಳು ಮತ್ತು ಅಲ್ಲಿನ ಸೌಕರ್ಯಗಳ ರಕ್ಷಣೆಗೆ ನಾವು ಬದ್ಧ’ ಎಂದು ಶ್ವೇತಭವನದ ಸಂವಹನ ಕಾರ್ಯತಂತ್ರದ ರಾಷ್ಟ್ರೀಯ ಭದ್ರತಾ ಮಂಡಳಿಯ ಸಮನ್ವಯಾಧಿಕಾರಿ ಜಾನ್‌ ಕಿರ್ಬಿ ಅವರು ಸುದ್ದಿಗಾರರಿಗೆ ಸೋಮವಾರ ತಿಳಿಸಿದ್ದಾರೆ.

ಭಾನುವಾರ ಖಾಲಿಸ್ತಾನ ಪರ ಘೋಷಣೆ ಕೂಗುತ್ತಾ ಕಾನ್ಸುಲೇಟ್‌ ಕಚೇರಿಗೆ ನುಗ್ಗಿದ್ದ ಪ್ರತಿಭಟನಾಕಾರರು, ಕಚೇರಿ ಆವರಣದಲ್ಲಿ ‘ಖಾಲಿಸ್ತಾನ ಧ್ವಜ’ವನ್ನು ಹಾರಿಸಲು ಯತ್ನಿಸಿದ್ದರು. ನಂತರ ಕಬ್ಬಿಣದ ರಾಡು ಬಳಸಿ ಕಚೇರಿಯ ಬಾಗಿಲು ಮತ್ತು ಕಿಟಕಿಗಳನ್ನು ಒಡೆದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.