ADVERTISEMENT

ಅಮೆರಿಕ: ಮುಂಬೈ ದಾಳಿಯ ಆರೋಪಿ ರಾಣಾಗೆ ಜಾಮೀನು ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 10:59 IST
Last Updated 14 ಡಿಸೆಂಬರ್ 2020, 10:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಮುಂಬೈ ಭಯೋತ್ಪಾದನಾ ದಾಳಿಯ (2008) ಪ್ರಮುಖ ಆರೋಪಿ, ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹವ್ವೂರ್ ರಾಣಾಗೆ ಜಾಮೀನು ನೀಡಲು ಅಮೆರಿಕದ ನ್ಯಾಯಾಲಯ ನಿರಾಕರಿಸಿದೆ.

ಪಾಕಿಸ್ತಾನಿ–ಅಮೆರಿಕನ್‌ ಹಾಗೂ ಎಲ್‌ಇಟಿ ಭಯೋತ್ಪಾದಕನಾಗಿರುವ ಡೇವಿಡ್ ಕೊಲ್ಮೆನ್ ಹೆಡ್ಲಿಯ ಬಾಲ್ಯದ ಗೆಳೆಯ ರಾಣಾನನ್ನುಭಾರತದ ಮನವಿ ಮೇರೆಗೆ ಜೂನ್‌ 10ರಂದು ಲಾಸ್‌ ಏಜಂಲೀಸ್‌ನಲ್ಲಿ ಪುನಃ ಬಂಧಿಸಲಾಗಿತ್ತು.

ಮುಂಬೈ ದಾಳಿ ರೂವಾರಿ ಡೇವಿಡ್ ಹೆಡ್ಲಿ ಅಮರಿಕದಲ್ಲಿ ಬಂಧಿತನಾಗಿದ್ದು, ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲಿ 35 ವರ್ಷಗಳ ಶಿಕ್ಷೆಗೆ ಒಳಗಾಗಿದ್ದಾನೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.