ADVERTISEMENT

ಅಮೆರಿಕ: ಕೋವಿಡ್‌ ಸಾವಿನ ಪ್ರಮಾಣ 9 ಲಕ್ಷಕ್ಕೆ ಏರಿಕೆ

ಏಜೆನ್ಸೀಸ್
Published 5 ಫೆಬ್ರುವರಿ 2022, 11:51 IST
Last Updated 5 ಫೆಬ್ರುವರಿ 2022, 11:51 IST
ಕೋವಿಡ್‌
ಕೋವಿಡ್‌   

ವಾಷಿಂಗ್ಟನ್‌: ಕೋವಿಡ್‌ ರೂಪಾಂತರ ತಳಿ ಅಮೆರಿಕದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ಶುಕ್ರವಾರ ಕೋವಿಡ್‌ ಸಾವಿನ ಪ್ರಮಾಣ 9 ಲಕ್ಷಕ್ಕೆ ಏರಿಕೆಯಾಗಿದೆ. ಎರಡು ತಿಂಗಳ ಹಿಂದೆ ಸಾವಿನ ಪ್ರಮಾಣ 8 ಲಕ್ಷ ತಲುಪಿತ್ತು.

ಜಾನ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯವು ಎರಡು ವರ್ಷಗಳ ಈ ಕೋವಿಡ್‌ನಿಂದ ಸಾವನ್ನಪ್ಪಿದವರ ದತ್ತಾಂಶ ಸಂಗ್ರಹಿಸಿದೆ.

ಲಸಿಕಾ ಅಭಿಯಾನ ಪ್ರಾರಂಭವಾದ 13 ತಿಂಗಳು ಲಸಿಕೆಯ ಬಗ್ಗೆ ತಪ್ಪು ಮಾಹಿತಿ ಬಿತ್ತರವಾಗಿತ್ತು. ಆದರೆ ಲಸಿಕೆಯು ಗಂಭೀರ ಅನಾರೋಗ್ಯ ಮತ್ತು ಸಾವನ್ನು ತಡೆಗಟ್ಟುವಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿದೆ ಎನ್ನಲಾಗಿದೆ.

ADVERTISEMENT

‘ಕೋವಿಡ್‌ ಸಾವಿನ ಸಂಖ್ಯೆಯಲ್ಲಿ ಬಹಳ ಹೆಚ್ಚಳವಿದೆ. ಎರಡು ವರ್ಷಗಳ ಹಿಂದೆ ನೀವು ಸಾಂಕ್ರಾಮಿಕ ರೋಗದಿಂದ ಕೆಲವು ವರ್ಷಗಳಲ್ಲಿ ಮರಣವನ್ನಪ್ಪುತ್ತೀರಿ ಎಂದು ಹೇಳಿದ್ದರೆ ಬಹುಶಃ ಅಮೆರಿಕನ್ನರು ನಂಬುತ್ತಿರಲಿಲ್ಲ’ ಎಂದು ಬ್ರೌನ್‌ ವಿಶ್ವವಿದ್ಯಾಲಯದ (ಸಾರ್ವಜನಿಕ ಆರೋಗ್ಯ) ಡೀನ್‌ ಡಾ. ಆಶಿಕ್‌ ಕೆ.ಝಾ ಹೇಳಿದರು. ಲಸಿಕೆ ಹಾಕಿಸುವುದನ್ನು ಅಧಿಕೃತಗೊಳಿಸಿದ ಬಳಿಕವೇ ಸಾವಿನ ಸಂಖ್ಯೆ ಅಧಿಕವಾಗಿದೆ ಎಂದು ಅವರು ತಿಳಿಸಿದರು.

‘ನಮಗೆ ಉತ್ತಮ ವೈದ್ಯಕೀಯ ವಿಜ್ಞಾನ ಸಿಕ್ಕಿತು. ಆದರೆ ಸಮಾಜ ವಿಜ್ಞಾನದಲ್ಲಿ ನಾವು ವಿಫಲರಾದೆವು. ಜನ ಲಸಿಕೆ ಪಡೆಯುವಂತೆ ಮಾಡುವಲ್ಲಿ, ಸುಳ್ಳು ಮಾಹಿತಿ ಹಬ್ಬುವುದನ್ನು ತಪ್ಪಿಸುವಲ್ಲಿ, ರಾಜಕೀಯಗೊಳಿಸದಂತೆ ಮಾಡುವಲ್ಲಿ ನಾವು ವಿಫಲರಾದವೆ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.