ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಸೌದಿ ಅರೇಬಿಯಾಕ್ಕೆ ಎಫ್–35 ಯುದ್ಧ ವಿಮಾನವನ್ನು ಮಾರಾಟ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇದರಿಂದ ಚೀನಾಗೆ ಅಮೆರಿಕದ ತಂತ್ರಜ್ಞಾನ ಸುಲಭವಾಗಿ ಸಿಗಲಿದೆ ಎನ್ನುವ ಕಳವಳಗಳು ವ್ಯಕ್ತವಾಗಿದ್ದರೂ, ಸೌದಿ ದೊರೆ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ವಾಷಿಂಗ್ಟನ್ ಭೇಟಿ ಮುನ್ನಾದಿನ ಈ ಘೋಷಣೆ ಮಾಡಿದ್ದಾರೆ.
ಸುಮಾರು ಏಳು ವರ್ಷಗಳ ನಂತರ ಸೌದಿ ದೊರೆ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ.
ಅಮೆರಿಕದ ಎಫ್–35 ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದ ಮತ್ತು ತಮ್ಮ ಸಾಮ್ರಾಜ್ಯಕ್ಕೆ ಅಮೆರಿಕದ ಮಿಲಿಟರಿ ರಕ್ಷಣೆಯ ವ್ಯಾಪ್ತಿಯನ್ನು ಹೆಚ್ಚಿಸುವ ಬಗ್ಗೆ ಸೇರಿದಂತೆ ಹಲವು ವಿಚಾರಗಳ ಕುರಿತು ಸೌದಿ ದೊರೆ ಮತ್ತು ಟ್ರಂಪ್ ಮಾತುಕತೆ ನಡೆಸುವ ನಿರೀಕ್ಷೆಯಿದೆ.
ಸೌದಿಗೆ ಯುದ್ಧ ವಿಮಾನ ಮಾರಾಟ ಮಾಡುವುದರಿಂದ, ನಿಕಟ ಸಂಬಂಧ ಹೊಂದಿರುವ ಚೀನಾ, ಅಮೆರಿಕದ ತಂತ್ರಜ್ಞಾನವನ್ನು ಕದಿಯಬಹುದು ಅಥವಾ ಒಂದಲ್ಲ ಒಂದು ಸಮಯದಲ್ಲಿ ವರ್ಗಾಯಿಸಿಕೊಳ್ಳಬಹುದು ಎನ್ನುವ ಆತಂಕವನ್ನು ಟ್ರಂಪ್ ಆಡಳಿತಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.