ADVERTISEMENT

ಅಮೆರಿಕ ನೇತೃತ್ವದ ಮಿತ್ರ ಪಡೆಗಳಿಂದ ಕಾರ್ಯಾಚರಣೆ: ಇರಾಕ್‌ ವಾಯು ನೆಲೆ ಮೇಲೆ ದಾಳಿ

ಅಮೆರಿಕ ನೇತೃತ್ವದ ಮಿತ್ರ ಪಡೆಗಳಿಂದ ಕಾರ್ಯಾಚರಣೆ

ಏಜೆನ್ಸೀಸ್
Published 3 ಮಾರ್ಚ್ 2021, 8:33 IST
Last Updated 3 ಮಾರ್ಚ್ 2021, 8:33 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬಾಗ್ದಾದ್‌: ಅಮೆರಿಕ ನೇತೃತ್ವದ ಮಿತ್ರ ಪಡೆಗಳು ಬುಧವಾರ ಪಶ್ಚಿಮ ಇರಾಕ್‌ ಪ್ರದೇಶದಲ್ಲಿನ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿವೆ.

ಕನಿಷ್ಠ 10 ರಾಕೆಟ್‌ಗಳು ಇರಾಕ್‌ನ ಸೇನಾ ನೆಲೆಗಳ ಮೇಲೆ ದಾಳಿ ಮಾಡಿವೆ ಎಂದು ಮಿತ್ರಪಡೆಗಳ ವಕ್ತಾರ ವಾಯ್ನೆ ಮೊರೊಟ್ಟೊ ತಿಳಿಸಿದ್ದಾರೆ.

ಬೆಳಿಗ್ಗೆ 7.20ಕ್ಕೆ ಐನ್‌ ಅಲ್‌–ಅಸಾದ್‌ ವಾಯು ನೆಲೆ ಮೇಲೆ ಮೊದಲು ದಾಳಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ದಾಳಿ ಸಂದರ್ಭದಲ್ಲಿ ಹಾನಿ ಪ್ರಮಾಣದ ಬಗ್ಗೆ ವರದಿಯಾಗಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.