ADVERTISEMENT

ಭಾರತದ ಜತೆ ಸಂಬಂಧ ಮತ್ತಷ್ಟು ದೃಢ: ಅಮೆರಿಕ

ಪಿಟಿಐ
Published 1 ಮಾರ್ಚ್ 2023, 11:26 IST
Last Updated 1 ಮಾರ್ಚ್ 2023, 11:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ‘ಭಾರತದೊಂದಿಗಿನ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದೇವೆ. ದಕ್ಷಿಣ ಏಷ್ಯಾದಲ್ಲಿಯೇ ಭಾರತವು ಮಹತ್ವದ ಸ್ಥಾನ ಹೊಂದಿರುವ ರಾಷ್ಟ್ರ’ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ.

‘ವಿಶ್ವದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತದ ಜತೆಗಿನ ಅಮೆರಿಕದ ಸಂಬಂಧ ಮತ್ತಷ್ಟು ವೃದ್ಧಿಸಿದೆ. ಈ ಬಾಂಧವ್ಯವನ್ನು ಮುಂದುವರಿಸಲಿದ್ದೇವೆ’ ಎಂದು ಇಲಾಖೆಯ ರಾಜಕೀಯ ಹಾಗೂ ಮಿಲಿಟರಿ ಬ್ಯುರೊದ ಸಹಾಯಕ ಕಾರ್ಯದರ್ಶಿ ಜೆಸ್ಸಿಕಾ ಲೆವಿಸ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಷ್ಯಾ ಜೊತೆಗಿನ ಭಾರತದ ಸಂಬಂಧ ಕುರಿತ ಪ್ರಶ್ನೆಗೆ, ‘ಉಕ್ರೇನ್‌–ರಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಎಲ್ಲ ದೇಶಗಳು ತಮ್ಮ ಶಸ್ತ್ರಾಸ್ತ್ರಗಳ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಮುಂದಾಗಿವೆ. ರಷ್ಯಾದೊಂದಿಗಿನ ವ್ಯವಹಾರ ಬಿಟ್ಟು, ಅಮೆರಿಕದ ಶಸ್ತ್ರಾಸ್ತ್ರ ಖರೀದಿಗೆ ಕೆಲ ರಾಷ್ಟ್ರಗಳು ಆಸಕ್ತಿ ತೋರಿವೆ. ಇನ್ನೂ ಕೆಲ ರಾಷ್ಟ್ರಗಳ ಮುಂದೆ ಹಲವಾರು ಆಯ್ಕೆಗಳಿವೆ’ ಎಂದು ಉತ್ತರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.