ADVERTISEMENT

ಅಮೆರಿಕ: ಮಹಿಳೆಯರ ಪರವಾದ ಎರಡು ಮಸೂದೆಗಳಿಗೆ ಅಸ್ತು

ಏಜೆನ್ಸೀಸ್
Published 18 ಮಾರ್ಚ್ 2021, 7:23 IST
Last Updated 18 ಮಾರ್ಚ್ 2021, 7:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಡೆಮಾಕ್ರಟಿಕ್ ನೇತೃತ್ವದ ಸದನವು (ಹೌಸ್‌ ಆಫ್‌ ರೆಪ್ರೆಸೆಂಟಿಟೀವ್ಸ್‌) ಬುಧವಾರ ಮಹಿಳೆಯರ ಪರವಾದ ಎರಡು ಮಸೂದೆಗಳಿಗೆ ಅನುಮೋದನೆ ನೀಡಿತು.

ಮೊದಲನೆಯದು ಮಹಿಳೆಯರನ್ನು ಕೌಟುಂಬಿಕ ದೌರ್ಜನ್ಯದಿಂದ ರಕ್ಷಿಸುವುದು, ಎರಡನೆಯದು ಸಮಾನ ಹಕ್ಕುಗಳ ತಿದ್ದುಪಡಿಯನ್ನು(ಇಆರ್‌ಎ) ಅಂಗೀಕರಿಸಲು ವಿಧಿಸಿರುವ ಗಡುವನ್ನು ತೆಗೆದು ಹಾಕುವುದು.

ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಪುನರ್ ದೃಢೀಕರಣ ಮಸೂದೆ, 244-172 ಮತಗಳಿಂದ ಅಂಗೀಕರಿಸಲ್ಪಟ್ಟಿತು. 29 ರಿಪಬ್ಲಿಕನ್ ಪಕ್ಷದವರು ಮಸೂದೆಯನ್ನು ಬೆಂಬಲಿಸುವುದರೊಂದಿಗೆ ಡೆಮಾಕ್ರಟಿಕ್ ಪಕ್ಷದೊಂದಿಗೆ ಸೇರಿದರು. ಇಆರ್‌ಎ ಅನುಮೋದನೆ ಗಡುವನ್ನು ರದ್ದುಗೊಳಿಸುವ ನಿರ್ಣಯವನ್ನು 222-204 ಮತಗಳಿಂದ ಅಂಗೀಕರಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.