ವಾಷಿಂಗ್ಟನ್: ಕೆನಡಾದ ಯೂಕೋನ್ ಪ್ರಾಂತ್ಯದ ವಾಯು ಪ್ರದೇಶದಲ್ಲಿ ಅಮೆರಿಕ ಹಾಗೂ ಕೆನಾಡ ದೇಶಗಳ ಜಂಟಿ ಕಾರ್ಯಾಚರಣೆಯಲ್ಲಿ ಅಪರಿಚಿತ ವಸ್ತುವನ್ನು ಹೊಡೆದುರುಳಿಸಲಾಗಿದೆ. ಇದು ಕೆನಡಾ ಮತ್ತು ಅಮೆರಿಕದಲ್ಲಿ ನಡೆದಿರುವ 3ನೇ ಘಟನೆಯಾಗಿದೆ.
ಯುಕೋನ್ ವಾಯುಪ್ರದೇಶದ 40 ಸಾವಿರ ಅಡಿ ಎತ್ತರದಲ್ಲಿ ಅಪರಿಚಿತ ವಸ್ತು ಹಾರಾಡುತ್ತಿತ್ತು. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆದೇಶದ ಹಿನ್ನಲೆಯಲ್ಲಿ ಶನಿವಾರ ಅದನ್ನು ಹೊಡೆದುರುಳಿಸಲಾಗಿದೆ.
ಜಸ್ಟಿನ್ ಟ್ರುಡೊ ಅವರ ಸಮ್ಮತಿ ಬಳಿಕ ಕೆನಡಾ ಮತ್ತು ಅಮೆರಿಕದ ಯುದ್ಧವಿಮಾನಗಳು ಕ್ಷಿಪ್ರ ಕಾರ್ಯಾಚರಣೆಗೆ ಇಳಿದಿದ್ದವು. ಅಮೆರಿಕದ ಎಫ್-22 ಯುದ್ಧ ವಿಮಾನ ಈ ವಸ್ತುವನ್ನು ನಾಶ ಮಾಡಿತು ಎಂದು ಜಸ್ಟಿನ್ ಟ್ರುಡೋ ಟ್ವೀಟ್ ಮಾಡಿದ್ದಾರೆ.
ಕಳೆದ ವಾರ ಚೀನಾದ ಗೂಢಚರ್ಯೆ ಬಲೂನು ಎನ್ನಲಾದ ವಸ್ತುವನ್ನು ಅಮೆರಿಕದ ಕ್ಷಿಪಣಿಗಳು ಹೊಡೆದುರುಳಿಸಿದ್ದವು. ಶುಕ್ರವಾರ ಅಮೆರಿಕದ ಅಲಾಸ್ಕ ವಾಯು ಪ್ರದೇಶದಲ್ಲಿ 40 ಸಾವಿರ ಅಡಿ ಎತ್ತರದಲ್ಲಿ ಸಾಗುತ್ತಿದ್ದ ಅಪರಿಚಿತ ವಸ್ತುವನ್ನು ಅಮೆರಿಕ ಯುದ್ಧ ವಿಮಾನಗಳು ಹೊಡೆದುರುಳಿಸಿದ್ದವು. ಶನಿವಾರ ಕೆನಡಾ ವಾಯು ನೆಲೆಯಲ್ಲಿ ಮತ್ತೊಂದು ವಸ್ತುವನ್ನು ಹೊಡೆದುರಳಿಸಲಾಗಿದೆ.
ಹೊಡೆದುರಳಿಸಲಾಗಿರುವ ಚೀನಾದ ಬಲೂನು ಸೇರಿದಂತೆ ಅಪರಿಚತ ವಸ್ತುಗಳ ಅವಶೇಷಗಳನ್ನು ಅಮೆರಿಕ ಸೇನೆ ಪರಿಶೀಲನೆ ಮಾಡುತ್ತಿದೆ ಎಂದು ವರದಿಯಾಗಿದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.