ADVERTISEMENT

ಹಾರ್ವರ್ಡ್‌ ವಿ.ವಿ ಪರ ಬಾಸ್ಟನ್‌ನ ಫೆಡರಲ್‌ ನ್ಯಾಯಾಧೀಶರ ತೀರ್ಪು

ರಾಯಿಟರ್ಸ್
Published 24 ಜೂನ್ 2025, 15:22 IST
Last Updated 24 ಜೂನ್ 2025, 15:22 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   

ಬಾಸ್ಟನ್‌: ವಿದೇಶಿ ವಿದ್ಯಾರ್ಥಿಗಳು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವುದನ್ನು ನಿರ್ಬಂಧಿಸುವ ಡೊನಾಲ್ಡ್‌ ಟ್ರಂಪ್ ಆಡಳಿತದ ನಿರ್ಧಾರಕ್ಕೆ ಬಾಸ್ಟನ್‌ನ ಫೆಡರಲ್‌ ನ್ಯಾಯಾಧೀಶರು ಸೋಮವಾರ ತಡೆ ನೀಡಿದ್ದಾರೆ.

ಅಮೆರಿಕದ ಜಿಲ್ಲಾ ನ್ಯಾಯಾಧೀಶರಾದ ಆ್ಯಲಿಸನ್‌ ಬರೋಸ್‌ ಅವರು ಇದಕ್ಕೆ ಸಂಬಂಧಿಸಿದ ಆದೇಶ ಹೊರಡಿಸಿದ್ದಾರೆ. ವಿದೇಶಿ ವಿದ್ಯಾರ್ಥಿಗಳನ್ನು ನಿರ್ಬಂಧಿಸುವ ಟ್ರಂಪ್‌ ಆಡಳಿತದ ನಿರ್ಧಾರವನ್ನು ಪ್ರಶ್ನಿಸಿ ಹಾರ್ವರ್ಡ್‌ ವಿ.ವಿ ಆಡಳಿತ ಮಂಡಳಿ ಬಾಸ್ಟನ್‌ ಫೆಡರಲ್‌ ನ್ಯಾಯಾಲಯದ ಮೊರೆ ಹೋಗಿತ್ತು.

ಶ್ವೇತಭವನದ ರಾಜಕೀಯ ಬೇಡಿಕೆಗಳನ್ನು ತಿರಸ್ಕರಿಸಿದ್ದಕ್ಕೆ ಕೈಗೊಂಡ ಪ್ರತೀಕಾರದ ಕ್ರಮ ಇದಾಗಿದೆ ಎಂದು ದೂರಿನಲ್ಲಿ ಆರೋಪಿಸಿತ್ತು.

ADVERTISEMENT

ಹಾರ್ವರ್ಡ್‌ ವಿ.ವಿಯಲ್ಲಿ ಹಾಲಿ ಶೈಕ್ಷಣಿಕ ವರ್ಷದಲ್ಲಿ ವಿದೇಶಗಳ 6,800ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.