ADVERTISEMENT

ಸಿರಿಯಾದಲ್ಲಿ ಅಮೆರಿಕ ಪಡೆಗಳ ಮೇಲೆ ದಾಳಿ ನಡೆದಿಲ್ಲ –ಅಮೆರಿಕ

ಅಮೆರಿಕ ಸೇನೆ ಸ್ಪಷ್ಟನೆ

ಏಜೆನ್ಸೀಸ್
Published 5 ಜುಲೈ 2021, 6:33 IST
Last Updated 5 ಜುಲೈ 2021, 6:33 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೈರೂತ್‌: ಸಿರಿಯಾದಲ್ಲಿ ತನ್ನ ಪಡೆಗಳ ಮೇಲೆ ದಾಳಿ ನಡೆದಿಲ್ಲ ಎಂದು ಅಮೆರಿಕ ಸೇನೆ ಸೋಮವಾರ ಸ್ಪಷ್ಟಪಡಿಸಿದೆ.

ಪೂರ್ವ ಸಿರಿಯಾದಲ್ಲಿರುವ ಅಮೆರಿಕ ಪಡೆಗಳ ಮೇಲೆ ಭಾನುವಾರ ತಡರಾತ್ರಿ ರಾಕೆಟ್‌ ದಾಳಿ ನಡೆಸಲಾಗಿದೆ ಎಂದು ವರದಿಯಾಗಿತ್ತು.

‘ರಾಕೆಟ್‌ ದಾಳಿ ನಡೆದಿದೆ ಎನ್ನುವ ವರದಿಗಳು ಸತ್ಯಕ್ಕೆ ದೂರವಾಗಿವೆ’ ಎಂದು ಸೇನೆಯ ವಕ್ತಾರ ಕರ್ನಲ್‌ ವಯ್ನೆ ಮರೊಟ್ಟು ತಿಳಿಸಿದ್ದಾರೆ.

ADVERTISEMENT

ಸಿರಿಯಾದ ಪೂರ್ವ ಭಾಗದ ಡೀರ್‌ ಎಲ್‌–ಝೌರ್‌ ಪ್ರಾಂತ್ಯದಲ್ಲಿ ರಾಕೆಟ್‌ ದಾಳಿ ನಡೆಸಲಾಗಿದೆ ಎಂದು ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸಿರಿಯಾದ ಸಂಸ್ಥೆ ತಿಳಿಸಿತ್ತು. ಸಿರಿಯಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಯು ಸಹ ರಾಕೆಟ್‌ ದಾಳಿಯ ವರದಿ ಮಾಡಿತ್ತು.

ಈಶಾನ್ಯ ಸಿರಿಯಾದಲ್ಲಿ ಅಮೆರಿಕದ ನೂರಾರು ಪಡೆಗಳನ್ನು ನಿಯೋಜಿಸಲಾಗಿದೆ. ಸಿರಿಯಾದ ಪ್ರಜಾಪ್ರಭುತ್ವ ಪರ ಇರುವ ಪಡೆಗಳ ಜತೆ ಜಂಟಿಯಾಗಿ ಅಮೆರಿಕ ಪಡೆಗಳು ಕಾರ್ಯಾಚರಣೆ ಕೈಗೊಂಡಿದ್ದು, ಇಸ್ಲಾಮಿಕ್‌ ಸಂಘಟನೆಗಳ ವಿರುದ್ಧ ಹೋರಾಟ ನಡೆಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.