ADVERTISEMENT

ಗಡಿ ಬಿಕ್ಕಟ್ಟಿನ ವೇಳೆ ಭಾರತಕ್ಕೆ ಮಾಹಿತಿ, ಉಪಕರಣ ಪೂರೈಕೆ

ಅಮೆರಿಕದ ಅಡ್ಮಿರಲ್ ಫಿಲಿಪ್ಸ್‌ ಡೇವಿಡ್‌ಸನ್‌ ಮಾಹಿತಿ

ಪಿಟಿಐ
Published 10 ಮಾರ್ಚ್ 2021, 13:07 IST
Last Updated 10 ಮಾರ್ಚ್ 2021, 13:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಗಡಿಗೆ ಸಂಬಂಧಿಸಿದಂತೆ ಚೀನಾದೊಂದಿಗೆ ಸಂಘರ್ಷ ಏರ್ಪಟ್ಟ ಸಮಯದಲ್ಲಿ ಭಾರತಕ್ಕೆ ಮಹತ್ವದ ಮಾಹಿತಿ, ಶೀತಪ್ರದೇಶದಲ್ಲಿ ಧರಿಸಲು ಬೇಕಾದ ವಸ್ತ್ರಗಳು ಹಾಗೂ ಹಲವು ಉಪಕರಣಗಳನ್ನು ಅಮೆರಿಕ ಒದಗಿಸಿತ್ತು ಎಂದು ಹಿರಿಯ ಮಿಲಿಟರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಮೆರಿಕದ ಇಂಡೊ–ಪೆಸಿಫಿಕ್‌ ಕಮಾಂಡ್‌ನ ಅಡ್ಮಿರಲ್‌ ಫಿಲಿಪ್ಸ್‌ ಡೇವಿಡ್‌ಸನ್‌ ಅವರು ಸೆನೆಟ್‌ನ ಆರ್ಮ್ಡ್‌ ಸರ್ವೀಸಸ್‌ ಕಮಿಟಿಗೆ ಈ ವಿಷಯ ತಿಳಿಸಿದ್ದಾರೆ.

ವಾಸ್ತವ ನಿಯಂತ್ರಣ ರೇಖೆ ಬಳಿ ಚೀನಾದ ಈ ಆಕ್ರಮಣಕಾರಿ ನಡೆಯನ್ನು ಹತ್ತಿಕ್ಕಲು ಮಿತ್ರರಾಷ್ಟ್ರಗಳ ನೆರವಿನ ಮಹತ್ವವನ್ನು ಭಾರತ ಮನಗಂಡಿತು. ಹೀಗಾಗಿ, ಬರುವ ದಿನಗಳಲ್ಲಿ ಭಾರತ ‘ಕ್ವಾಡ್‌’ನೊಂದಿಗಿನ ಸಂಬಂಧವನ್ನು ಮತ್ತಷ್ಟೂ ಗಟ್ಟಿಗೊಳಿಸುವುದು ನಿಶ್ಚಿತ ಎಂದು ಫಿಲಿಪ್ಸ್‌ ಹೇಳಿದರು.

ADVERTISEMENT

‘ಭಾರತ ಹಲವು ವರ್ಷಗಳಿಂದ ಅಲಿಪ್ತ ನೀತಿಯನ್ನು ಅನುಸರಿಸಿಕೊಂಡು ಬರುತ್ತಿದೆ. ಆದಾಗ್ಯೂ, ತನ್ನ ಗಡಿ ರಕ್ಷಣೆಗಾಗಿ ಕ್ವಾಡ್‌ನೊಂದಿಗಿನ ಬಾಂಧವ್ಯವನ್ನು ಭಾರತ ಸದೃಢಗೊಳಿಸುವುದು. ಕಾರ್ಯತಂತ್ರದ ದೃಷ್ಟಿಯಿಂದ ಇದು ಅಮೆರಿಕ, ಆಸ್ಟ್ರೇಲಿಯಾ ಹಾಗೂ ಜಪಾನ್‌ಗೆ ಮಹತ್ವದ ವಿಷಯ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.