ADVERTISEMENT

ಭಾರತ, ಚೀನಾ ಅಕ್ರಮ ಮಾದಕವಸ್ತು ಸಾಗಣೆ ದೇಶಗಳು: ಅಮೆರಿಕ

ಪಿಟಿಐ
Published 17 ಸೆಪ್ಟೆಂಬರ್ 2025, 16:06 IST
Last Updated 17 ಸೆಪ್ಟೆಂಬರ್ 2025, 16:06 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನ್ಯೂಯಾರ್ಕ್‌/ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಚೀನಾ, ಅಫ್ಘಾನಿಸ್ತಾನ, ಭಾರತ ಮತ್ತು ಪಾಕಿಸ್ತಾನ ಸೇರಿದಂತೆ 23 ದೇಶಗಳನ್ನು ಪ್ರಮುಖ ಮಾದಕವಸ್ತು ಸಾಗಣೆ ಅಥವಾ ಅಕ್ರಮ ಮಾದಕವಸ್ತು ಉತ್ಪಾದಕ ರಾಷ್ಟ್ರಗಳ ಪಟ್ಟಿಯಲ್ಲಿ ಹೆಸರಿಸಿದ್ದಾರೆ.

ಅಕ್ರಮ ಮಾದಕವಸ್ತು ಮತ್ತು ಅದಕ್ಕೆ ಬಳಕೆಯಾಗುವ ರಾಸಾಯನಿಕಗಳನ್ನು ತಯಾರಿಸುವ ಹಾಗೂ ಸಾಗಿಸುವ ಮೂಲಕ ಈ ದೇಶಗಳು ಅಮೆರಿಕ ಮತ್ತು ಅದರ ಪ್ರಜೆಗಳ ಸುರಕ್ಷತೆಗೆ ಬೆದರಿಕೆ ಹಾಕುತ್ತಿವೆ ಎಂದು ಅವರು ಹೇಳಿದ್ದಾರೆ. ಈ ಕುರಿತ ಅಧ್ಯಕ್ಷ ಟ್ರಂಪ್‌ ಅವರ ನಿರ್ಣಯವನ್ನು ಸೋಮವಾರ ಕಾಂಗ್ರೆಸ್‌ಗೆ ಸಲ್ಲಿಸಲಾಗಿದೆ. 

ADVERTISEMENT

ಬಹಾಮಾಸ್‌, ಬೆಲೀಜ್‌, ಬೊಲಿವಿಯಾ, ಬರ್ಮಾ, ಕೊಲಂಬಿಯಾ, ಕೋಸ್ಟರಿಕಾ, ಡೊಮಿನಿಕನ್‌ ರಿಪಬ್ಲಿಕ್‌, ಈಕ್ವೆಡಾರ್‌, ಎಲ್‌ ಸಾಲ್ವಡಾರ್, ಗ್ವಾಟೆಮಾಲಾ, ಹೈಟಿ, ಹಾಂಡುರಾಸ್‌, ಜಮೈಕಾ, ಲಾವೋಸ್‌, ಮೆಕ್ಸಿಕೊ, ನಿಕರಾಗುವಾ, ಪನಾಮಾ, ಪೆರು, ವೆನೆಜುವೆಲಾ ದೇಶಗಳೂ ಈ ಪಟ್ಟಿಯಲ್ಲಿ ಸೇರಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.