ADVERTISEMENT

ಕೋವಿಡ್‌ ವಿಚಾರದಲ್ಲಿ ಭಾರತಕ್ಕೆ ನಿರಂತರ ನೆರವು: ಅಮೆರಿಕ ಭರವಸೆ

ಪಿಟಿಐ
Published 18 ಮೇ 2021, 6:37 IST
Last Updated 18 ಮೇ 2021, 6:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ವಾಷಿಂಗ್ಟನ್‌: ‘ಕೋವಿಡ್‌ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಅಮೆರಿಕವು ನಿರಂತರವಾಗಿ ನೆರವು ನೀಡಲಿದೆ’ ಎಂದು ಶ್ವೇತಭವನ ಸೋಮವಾರ ತಿಳಿಸಿದೆ.

‘ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ಕೋವಿಡ್‌ ಪರಿಸ್ಥಿತಿ ನಿಭಾಯಿಸಲು ಭಾರತಕ್ಕೆ ₹730 ಕೋಟಿ ಮೌಲ್ಯದ ನೆರವು ನೀಡುವುದಾಗಿ ಘೋಷಿಸಿದ್ದಾರೆ’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ನಮ್ಮ ‍ಪ್ರಮುಖ ಪಾಲುದಾರ ರಾಷ್ಟ್ರ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳ ಮೇಲೆ ಕೋವಿಡ್‌ ಪರಿಣಾಮ ಬೀರುತ್ತಿದೆ. ಹಾಗಾಗಿ ದೇಶಗಳಿಗೆ ಯಾವ ರೀತಿಯ ನೆರವುಗಳನ್ನು ಒದಗಿಸಬೇಕು ಎಂಬುದರ ಬಗ್ಗೆ ಬೈಡನ್‌ ಗಂಭೀರವಾಗಿ ಚರ್ಚೆ ನಡೆಸುತ್ತಿದ್ದಾರೆ. ನಾವು ಕಠಿಣ ಪರಿಸ್ಥಿತಿಯಲ್ಲಿ ಭಾರತದೊಂದಿಗೆ ನಿಂತಿದ್ಧೇವೆ. ಅಮೆರಿಕವು ನಿರಂತರವಾಗಿ ಭಾರತಕ್ಕೆ ನೆರವು ಒದಗಿಸಲಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ಈಗಾಗಲೇ ಇಂಟರ್‌ನ್ಯಾಷನಲ್‌ ಡೆವೆಲಪ್‌ಮೆಂಟ್‌ ಟು ಇಂಡಿಯಾ ಎಂಬ ಅಮೆರಿಕದ ಸಂಸ್ಥೆಯ ಮೂಲಕ ಭಾರತಕ್ಕೆ ಏಳು ವಿಮಾನಗಳಲ್ಲಿ ನೆರವು ಕಳುಹಿಸಿದ್ಧೇವೆ. ಏಳನೇ ವಿಮಾನದಲ್ಲಿ ಆಮ್ಲಜನಕ ಉತ್ಪಾದಿಸುವ ಕಾನ್ಸನ್‌ಟ್ರೇಟರ್‌ಗಳನ್ನು ಭಾರತಕ್ಕೆ ರವಾನೆ ಮಾಡಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.