ADVERTISEMENT

ಅಫ್ಗನ್ ಪರಿಸ್ಥಿತಿ ಕುರಿತು ಬ್ಲಿಂಕನ್‌ ಜೊತೆ ಜೈಶಂಕರ್ ಚರ್ಚೆ

ಪಿಟಿಐ
Published 17 ಆಗಸ್ಟ್ 2021, 9:36 IST
Last Updated 17 ಆಗಸ್ಟ್ 2021, 9:36 IST
ಜೈಶಂಕರ್‌
ಜೈಶಂಕರ್‌   

ವಾಷಿಂಗ್ಟನ್‌: ಅಫ್ಗಾನಿಸ್ತಾನದಲ್ಲಿರುವ ಭಾರತೀಯರನ್ನು ಕರೆತರುವುದಕ್ಕಾಗಿ ಕಾಬೂಲ್‌ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತುರ್ತಾಗಿ ಆರಂಭಿಸುವ ಅಗತ್ಯದ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್‌ ಅವರೊಂದಿಗೆ ಚರ್ಚಿಸಿರುವುದಾಗಿ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಟ್ವೀಟ್‌ ಮಾಡಿದ್ದಾರೆ.

ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳಲು ಸೋಮವಾರ ನ್ಯೂಯಾರ್ಕ್‌ಗೆ ಆಗಮಿಸಿರುವ ಜೈಶಂಕರ್‌, ಅಫ್ಗಾನಿಸ್ತಾನದ ಪರಿಸ್ಥಿತಿ ಕುರಿತುಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕನ್‌ ಅವರೊಂದಿಗೆ ಚರ್ಚಿಸುವ ವೇಳೆ, ಈ ವಿಷಯವನ್ನು ಒತ್ತಿ ಹೇಳಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ನೆಡ್‌ ಪ್ರೈಸ್‌ ಇಲ್ಲಿ ತಿಳಿಸಿದ್ದಾರೆ.

ಇದೇ ವೇಳೆ, ಜೈಶಂಕರ್ ಅವರು ಕಾಬೂಲ್‌ನಿಂದ ಭಾರತೀಯ ರಾಜತಾಂತ್ರಿಕರನ್ನು ಸ್ಥಳಾಂತರಿಸುವ ಕುರಿತು ಅಮೆರಿಕದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ADVERTISEMENT

ಈ ಮಧ್ಯೆ, ಅಫ್ಗಾನಿಸ್ತಾನದ ಕಾಬೂಲ್‌ನಿಂದ ನೂರಕ್ಕೂ ಹೆಚ್ಚು ಭಾರತೀಯರನ್ನು ಹೊತ್ತ ಸಿ–17 ಭಾರತೀಯ ವಾಯುಪಡೆಯ ವಿಮಾನ ಮಂಗಳವಾರ ಮಧ್ಯಾಹ್ನ ಗುಜರಾತ್‌ನ ಜಾಮ್‌ನಗರದ ಎಐಎಫ್‌ ವಾಯುನೆಲೆಗೆ ಬಂದಿಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.