ADVERTISEMENT

ಅಮೆರಿಕ: ಕೋವಿಡ್‌ ಚಿಕಿತ್ಸೆ ತಾರತಮ್ಯ ತಡೆಗಟ್ಟಲು ಮಾರ್ಗಸೂಚಿ ಪ್ರಕಟ

ಏಜೆನ್ಸೀಸ್
Published 21 ಜುಲೈ 2020, 6:43 IST
Last Updated 21 ಜುಲೈ 2020, 6:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಕೋವಿಡ್‌ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಜನಾಂಗ, ವರ್ಣ ಮತ್ತು ರಾಷ್ಟ್ರೀಯ ಮೂಲದ ಆಧಾರದ ಮೇಲೆ ತಾರತಮ್ಯ ಆಗದಂತೆ ತಡೆಯಲು ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯು ಮಾರ್ಗಸೂಚಿಯನ್ನು ಪ್ರಕಟಿಸಿದೆ.

‘ಕಪ್ಪು ವರ್ಣೀಯರು ಮತ್ತು ಜನಾಂಗೀಯ ಅಲ್ಪಸಂಖ್ಯಾತರಿಗೆ ತುರ್ತು ಚಿಕಿತ್ಸೆ, ಆಸ್ಪತ್ರೆ ಪ್ರವೇಶಕ್ಕೆ ಹೆಚ್ಚು ಹೊತ್ತು ಕಾಯುವಂತೆ ಮಾಡಬಾರದು. ಸಕಾರಣವಿಲ್ಲದೇ ಪ್ರವೇಶ ನಿರಾಕರಿಸಬಾರದು. ಬಹುಸಂಖ್ಯಾತರು ತೀವ್ರ ಅಸ್ವಸ್ಥರಾದಾಗ ನೀಡುವ ತೀವ್ರ ನಿಗಾ ಘಟಕದ ಸೇವೆಯನ್ನೇ ಅವರಿಗೂ ಒದಗಿಸಬೇಕು’ ಎಂದು ಸೋಮವಾರ ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಅಲ್ಪ ಸಂಖ್ಯಾತ ಸಮುದಾಯಕ್ಕೆ ನಿಕಟವಾದ ಪ್ರದೇಶದಲ್ಲಿ ಕೊರೊನಾ ಸೋಂಕು ಪರೀಕ್ಷಾ ಘಟಕಗಳನ್ನು ಸ್ಥಾಪಿಸುವಂತೆಯೂ ಈ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ADVERTISEMENT

ಕೋವಿಡ್‌ ಸಮಯದಲ್ಲಿ ಜನಾಂಗೀಯ ತಾರತಮ್ಯ ಬೆಳಕಿಗೆ ಬಂದಿದೆ. ಅಮೆರಿಕದಲ್ಲಿ ತಲೆಮಾರುಗಳಿಂದ ಬಣ್ಣ, ಜನಾಂಗದ ಆಧಾರದ ಮೇಲೆ ತಾರತಮ್ಯ ನಡೆಯುತ್ತಿದೆ ಎಂಬ ವಿಷಯವನ್ನು ನಾವು ಒಪ್ಪಿಕೊಳ್ಳಬೇಕು ಎಂದು ಸರ್ಜನ್‌ ಜನರಲ್‌ ಜೆರೊಮ್‌ ಆ್ಯಡಮ್ಸ್‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.