

ವಾಷಿಂಗ್ಟನ್: ವೆನೆಜುವೆಲಾಗೆ ಸಂಬಂಧಿಸಿದ ನಿಷೇಧಿತ ತೈಲ ಟ್ಯಾಂಕರನ್ನು ಉತ್ತರ ಅಟ್ಲಾಂಟಿಕಾದಲ್ಲಿ ಅಮೆರಿಕ ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೆನೆಜುವೆಲಾದ ಸುತ್ತ ಅಮೆರಿಕ ಹಾಕಿದ್ದ ನೌಕಾ ದಿಗ್ಬಂಧನವನ್ನು ದಾಟಲು ಯತ್ನಿಸಿದ್ದ ಆ ತೈಲ ಟ್ಯಾಂಕರ್ ಅನ್ನು ಕಳೆದ ತಿಂಗಳಿನಿಂದ ಹುಡಕಲಾಗುತ್ತಿತ್ತು ಎಂದು ಅಮೆರಿಕದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಲೆಬನಾನ್‌ನ ಬಂಡುಕೋರ ಸಂಘಟನೆ ಹಿಜ್ಬುಲ್ಲಾಗೆ ಸಂಬಂಧಿಸಿದ ಕಂಪನಿಯೊಂದಕ್ಕೆ ಸರಕು ಸಾಗಿಸಿದ ಆರೋಪದಡಿ ಈ ಹಡಗನ್ನು ಅಮೆರಿಕ 2024ರಲ್ಲಿ ನಿಷೇಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.