ADVERTISEMENT

75ನೇ ಸ್ವಾತಂತ್ರ್ಯೋತ್ಸವ: ಅಮೆರಿಕದ ಗಾಯಕಿ ಮೇರಿ ಮಿಲಬೆನ್‌ ಅತಿಥಿ

ಪಿಟಿಐ
Published 6 ಆಗಸ್ಟ್ 2022, 10:24 IST
Last Updated 6 ಆಗಸ್ಟ್ 2022, 10:24 IST
ಮೇರಿ ಮಿಲಾಬೆನ್‌ | ಟ್ವಿಟರ್‌ ಚಿತ್ರ
ಮೇರಿ ಮಿಲಾಬೆನ್‌ | ಟ್ವಿಟರ್‌ ಚಿತ್ರ   

ವಾಷಿಂಗ್ಟನ್‌: ಭಾರತದ 75ನೇ ಸ್ವಾತಂತ್ರ್ಯೋತ್ಸವಕ್ಕೆ ಅತಿಥಿಯಾಗಿ ಆಫ್ರಿಕ ಮೂಲದ ಅಮೆರಿಕದ ಹಾಡುಗಾರ್ತಿ ಮೇರಿ ಮಿಲಾಬೆನ್‌ ಅವರು ಆಗಮಿಸಲಿದ್ದಾರೆ.

ರಾಷ್ಟ್ರಗೀತೆ 'ಜನ ಗಣ ಮನ' ಮತ್ತು ಭಕ್ತಿ ಗೀತೆ 'ಓಂ ಜೈ ಜಗದೀಶ್‌ ಹರೇ' ಗೀತೆಗಳ ಮೂಲಕ ಪರಿಚಿತರಾಗಿರುವ ಮಿಲಾಬೆನ್‌ ಅವರನ್ನು ಭಾರತೀಯ ಸಾಂಸ್ಕೃತಿಕ ಸಂಬಂಧಿ ಕೌನ್ಸಿಲ್‌ (ಐಸಿಸಿಆರ್‌) ಅತಿಥಿಯಾಗಿ ಆಹ್ವಾನಿಸಿದೆ.

'1959ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಡಾ. ಮಾರ್ಟಿನ್‌ ಲೂಥರ್‌ ಕಿಂಗ್‌ ಅವರ ಸ್ಮರಣಾರ್ಥ, 75ನೇ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿದೆ. ಅಮೆರಿಕದ ಸಾಂಸ್ಕೃತಿಕ ರಾಯಭಾರಿಯಾಗಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ' ಎಂದು ಮಿಲಾಬೆನ್‌ ಸಂತಸ ವ್ಯಕ್ತಪಡಿಸಿದ್ದಾರೆ.

ADVERTISEMENT

ಮಿಲಾಬೆನ್‌ ಅವರು ಸ್ವಾತಂತ್ರ್ಯೋತ್ಸವಕ್ಕೆ ಐಸಿಸಿಆರ್‌ ಆಹ್ವಾನಿಸುತ್ತಿರುವ ಮೊದಲ ಅಮೆರಿಕದ ಕಲಾವಿದೆಯಾಗಿದ್ದಾರೆ. 40 ವರ್ಷದ ಮಿಲಾಬೆನ್‌ ಅವರು ಅಮೆರಿಕವನ್ನು ಪ್ರತಿನಿಧಿಸುತ್ತಿರುವ ಅಧಿಕೃತ ಅತಿಥಿಯಾಗಿದ್ದಾರೆ.

ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವುದರಿಂದ ಅತ್ಯಂತ ಖುಷಿಯಾಗಿದ್ದೇನೆ. ಬೇರೆ ರಾಷ್ಟ್ರಗಳಿಗೆ ನಾನೊಬ್ಬ ಪ್ರವಾಸಿಯಾಗಿ ಹೋಗಬಹುದು, ಆದರೆ ಭಾರತಕ್ಕೆ ನಾನು ಯಾತ್ರಾರ್ಥಿಯಾಗಿ ಬಂದಿದ್ದೇನೆ- ಎಂಬ ಮಾರ್ಟಿನ್‌ ಲೂಥರ್‌ ಮಾತುಗಳು ನೆನಪಾಗುತ್ತಿವೆ ಎಂದು ಮಿಲಾಬೆನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.