
ಮಾರ್ಕೊ ರೂಬಿಯೊ
ವಾಷಿಂಗ್ಟನ್: ವೆನೆಜುವೆಲಾದ ಮಧ್ಯಂತರ ಸರ್ಕಾರದ ನಾಯಕರು ಅಮೆರಿಕದ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳದಿದ್ದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಆ ದೇಶದ ವಿರುದ್ಧ ಹೊಸದಾಗಿ ಸೈನಿಕ ಕಾರ್ಯಾಚರಣೆ ನಡೆಸಲು ಸಿದ್ಧವಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ.
ಸೆನೆಟ್‌ನ ವಿದೇಶಾಂಗ ಸಂಬಂಧಗಳ ಸಮಿತಿ ಮುಂದೆ ಹೊಸ ಸೈನಿಕ ಕಾರ್ಯಾಚರಣೆ ಬಗ್ಗೆ ಮಂಡಿಸಲು ಸಿದ್ಧಪಡಿಸಿಕೊಂಡಿರುವುದಾಗಿ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಅಮೆರಿಕವು ವೆನೆಜುವೆಲಾ ಜತೆಗೆ ಯುದ್ಧ ನಡೆಸುತ್ತಿಲ್ಲ. ಅಲ್ಲಿನ ಮಧ್ಯಂತರ ಸರ್ಕಾರದ ನಾಯಕರು ನಮ್ಮೊಂದಿಗೆ ಸಹಕರಿಸುತ್ತಿದ್ದಾರೆ. ಆದರೆ ಅಗತ್ಯವಿದ್ದರೆ ಟ್ರಂಪ್ ಆಡಳಿತವು ಬಲ ಪ್ರಯೋಗ ಮಾಡುವುದನ್ನು ತಳ್ಳಿಹಾಕುವುದಿಲ್ಲ’ ಎಂದು ಅವರು ಉಲ್ಲೇಖಿಸಿದ್ದಾರೆ.
‘ನಾವು ಬಳಸುವ ಇತರ ವಿಧಾನಗಳು ವಿಫಲವಾದರೆ ಬಲಪ್ರಯೋಗಿಸಲು ಸಿದ್ಧರಿದ್ದೇವೆ. ಅಮೆರಿಕದ ಜನರ ಒಳಿತಿಗಾಗಿ ಕರ್ತವ್ಯ ನಿರ್ವಹಿಸುವುದರಿಂದ ಹಿಂದೆ ಸರಿಯುವುದಿಲ್ಲ. ಆದರೆ ಇದರ ಅಗತ್ಯ ಬರುವುದಿಲ್ಲ ಎಂಬುದು ನಮ್ಮ ಆಶಯ’ ಎಂದು ರೂಬಿಯೊ ಪ್ರಸ್ತಾಪಿಸಿದ್ದಾರೆ.
ಈ ಕುರಿತು ಅವರು ಸಿದ್ಧಪಡಿಸಿದ ಆರಂಭಿಕ ಹೇಳಿಕೆಯನ್ನು ಅಮೆರಿಕದ ವಿದೇಶಾಂಗ ಇಲಾಖೆ ಮಂಗಳವಾರ ಬಿಡುಗಡೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.