ADVERTISEMENT

ಪಾಕ್ ಸೇರಿ 75 'ಹೈ ರಿಸ್ಕ್' ದೇಶಗಳ ಜನರಿಗೆ ವಲಸೆ ವೀಸಾ ಸ್ಥಗಿತಗೊಳಿಸಿದ ಅಮೆರಿಕ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 6:27 IST
Last Updated 15 ಜನವರಿ 2026, 6:27 IST
<div class="paragraphs"><p>ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌</p></div>

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

   

ವಾಷಿಂಗ್ಟನ್: ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೇರಿದಂತೆ 75 'ಹೆಚ್ಚಿನ ಅಪಾಯ' ದೇಶಗಳ ವ್ಯಕ್ತಿಗಳಿಗೆ ವಲಸೆ ವೀಸಾ ನೀಡುವುದನ್ನು ಅಮೆರಿಕ ಸ್ಥಗಿತಗೊಳಿಸಿದ್ದು, ಈ ಕ್ರಮವು ಪ್ರವಾಸಿ ಅಥವಾ ಕೆಲಸದ ವೀಸಾಗಳಿಗೆ ಅನ್ವಯಿಸುವುದಿಲ್ಲ. ಅಮೆರಿಕದಲ್ಲಿ ಶಾಶ್ವತವಾಗಿ ವಾಸಿಸಲು ಬಯಸುವವರ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿ ತಿಳಿಸಿದೆ.

ವಲಸೆ ವೀಸಾ ಪ್ರಕ್ರಿಯೆ ಸ್ಥಗಿತಗೊಂಡ 75 ದೇಶಗಳ ಪಟ್ಟಿಯನ್ನು ಬುಧವಾರ ಅಮೆರಿಕದ ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿದೆ. ಅಮೆರಿಕದಲ್ಲಿ ನೆಲೆಯೂರಿ ಸಾರ್ವಜನಿಕ ಸೌಲಭ್ಯವನ್ನು ಪಡೆದುಕೊಳ್ಳುವ ವಿದೇಶಿಗರ ಸಂಖ್ಯೆಯನ್ನು ಕಡಿತಗೊಳಿಸುವುದು ಅಧ್ಯಕ್ಷ ಟ್ರಂಪ್ ಅವರ ಉದ್ದೇಶವಾಗಿದೆ ಎಂದು ವರದಿ ತಿಳಿಸಿದೆ.

ADVERTISEMENT

'ವಲಸಿಗರು ಆರ್ಥಿಕವಾಗಿ ಸ್ವಾವಲಂಬಿಗಳಾಗಿರಬೇಕು ಮತ್ತು ಅಮೆರಿಕನ್ನರಿಗೆ ಆರ್ಥಿಕ ಹೊರೆಯಾಗಬಾರದು ಎಂದು ಅಧ್ಯಕ್ಷ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಅಪಾಯದ ದೇಶಗಳ ವಲಸಿಗರು ಅಮೆರಿಕದ ಕಲ್ಯಾಣ ಕಾರ್ಯಕ್ರಮಗಳನ್ನು ಬಳಸಿಕೊಳ್ಳದಂತೆ ನೋಡಿಕೊಳ್ಳಲು ವಿದೇಶಾಂಗ ಇಲಾಖೆಯು ತನ್ನ ಎಲ್ಲ ನೀತಿಗಳು, ನಿಯಮಗಳು ಮತ್ತು ಮಾರ್ಗಸೂಚಿಗಳ ಸಂಪೂರ್ಣ ಪರಿಶೀಲನೆ ನಡೆಸುತ್ತಿದೆ’ ಎಂದು ವಿದೇಶಾಂಗ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಜನವರಿ 21ರಿಂದ ಜಾರಿಗೆ ಬರುವಂತೆ, ಅಫ್ಗಾನಿಸ್ತಾನ, ಅಲ್ಬೇನಿಯಾ, ಆಂಟಿಗುವಾ, ಬಾರ್ಬುಡಾ, ಅರ್ಮೇನಿಯಾ, ಅಜೆರ್ಬೈಜಾನ್, ಬಹಾಮಾಸ್, ಬಾಂಗ್ಲಾದೇಶ, ಬಾರ್ಬಡೋಸ್, ಬೆಲಾರಸ್, ಭೂತಾನ್, ಬ್ರೆಜಿಲ್, ಬರ್ಮಾ, ಕಾಂಬೋಡಿಯಾ ಸೇರಿದಂತೆ 75 ದೇಶಗಳ ವಲಸೆ ವೀಸಾ ಅರ್ಜಿದಾರರಿಗೆ ಎಲ್ಲ ವೀಸಾ ವಿತರಣೆಗಳನ್ನು ಇಲಾಖೆ ಸ್ಥಗಿತಗೊಳಿಸುತ್ತಿದೆ.

ಕ್ಯೂಬಾ, ಕಾಂಗೊ, ಈಜಿಪ್ಟ್, ಇರಾನ್, ಇರಾಕ್, ಜೋರ್ಡಾನ್, ಕುವೈತ್, ಲಿಬಿಯಾ, ನೇಪಾಳ, ಪಾಕಿಸ್ತಾನ, ರಷ್ಯಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಸೊಮಾಲಿಯಾ, ಸಿರಿಯಾ, ಥೈಲ್ಯಾಂಡ್, ಉರುಗ್ವೆ, ಉಜ್ಬೇಕಿಸ್ತಾನ್, ಯೆಮೆನ್. ದೇಶಗಳೂ ಈ ಪಟ್ಟಿಯಲ್ಲಿವೆ.

ಈ ಸ್ಥಗಿತವು ಪ್ರವಾಸಿ ವೀಸಾಗಳಿಗೆ ಅನ್ವಯಿಸುವುದಿಲ್ಲ. ನಿರ್ದಿಷ್ಟವಾಗಿ ವಲಸೆ ವೀಸಾ ಅರ್ಜಿದಾರರಿಗೆ ಮಾತ್ರ ಎಂದು ಇಲಾಖೆ ತಿಳಿಸಿದೆ. ಪ್ರವಾಸಿ ವೀಸಾಗಳು ವಲಸೆಯೇತರ ವೀಸಾಗಳಾಗಿವೆ ಎಂದು ಅದು ಹೇಳಿದೆ.

ಅಮೆರಿಕದಲ್ಲಿ ಶಾಶ್ವತವಾಗಿ ವಾಸಿಸಲು ಬಯಸುವ ವ್ಯಕ್ತಿಗೆ ವಲಸೆ ವೀಸಾ ನೀಡಲಾಗುತ್ತದೆ.

ಅಮೆರಿಕ ಪ್ರಜೆಯ ಸಂಗಾತಿ, ಅಮೆರಿಕ ಪ್ರಜೆಯನ್ನು ಮದುವೆಯಾಗಿ ಅಮೆರಿಕದಲ್ಲಿ ವಾಸಿಸಲು ಬಯಸುವವರು, ಅಮೆರಿಕ ನಾಗರಿಕರ ಕೆಲವು ಕುಟುಂಬ ಸದಸ್ಯರು ಮತ್ತು ಕಾನೂನುಬದ್ಧ ಶಾಶ್ವತ ನಿವಾಸಿಗಳು ಹಾಗೂ ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಮೂಲಕ ಅಮೆರಿಕದಲ್ಲಿ ಶಾಶ್ವತವಾಗಿ ವಾಸಿಸಬಹುದಾದ ಕೆಲವು ಉದ್ಯೋಗ ಆಧಾರಿತ ವಲಸಿಗರಿಗೆ ವಲಸೆ ವೀಸಾ ನೀಡಲಾಗುತ್ತದೆ.

ವಲಸೆರಹಿತ ವೀಸಾಗಳನ್ನು ಅಮೆರಿಕದ ಹೊರಗೆ ಶಾಶ್ವತ ನಿವಾಸ ಹೊಂದಿರುವ, ಪ್ರವಾಸೋದ್ಯಮ, ವೈದ್ಯಕೀಯ ಚಿಕಿತ್ಸೆ, ವ್ಯವಹಾರ, ತಾತ್ಕಾಲಿಕ ಕೆಲಸ ಅಥವಾ ಅಧ್ಯಯನಕ್ಕಾಗಿ ಆಧಾರದ ಮೇಲೆ ದೇಶವನ್ನು ಪ್ರವೇಶಿಸಲು ಬಯಸುವ ವ್ಯಕ್ತಿಗಳಿಗೆ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.