ADVERTISEMENT

‘ಎ–ಸ್ಯಾಟ್‌ ಬೇಹುಗಾರಿಕೆ ನಡೆಸಿಲ್ಲ’

ಭಾರತದಿಂದ ಉಪಗ್ರಹ ನಾಶಕ ಕ್ಷಿಪಣಿ ಪರೀಕ್ಷೆ

ಪಿಟಿಐ
Published 30 ಮಾರ್ಚ್ 2019, 17:29 IST
Last Updated 30 ಮಾರ್ಚ್ 2019, 17:29 IST
   

ವಾಷಿಂಗ್ಟನ್‌: ‘ಭಾರತ ಉಪಗ್ರಹ ನಾಶಪಡಿಸುವ ಕ್ಷಿಪಣಿ ಪರೀಕ್ಷೆ ನಡೆಸಿರುವ ಬಗ್ಗೆ ತಾನು ಬೇಹುಗಾರಿಕೆ ನಡೆಸಿದ್ದೆ’ ಎನ್ನಲಾದ ವರದಿಗಳನ್ನು ಪೆಂಟಗನ್‌ ತಳ್ಳಿ ಹಾಕಿದೆ.

ಹಿಂದೂಮಹಾಸಾಗರದಲ್ಲಿ ತನ್ನ ನೆಲೆಯಾದ ಡಿಯಾಗೊ ಗಾರ್ಸಿಯಾದಿಂದ ವಾಯುನೌಕೆಯನ್ನು ಕಳುಹಿಸಿ ಕ್ಷಿಪಣಿ ಪರೀಕ್ಷೆಗೆ ಸಂಬಂಧಿಸಿದ ಬೆಳವಣಿಗೆಗಳನ್ನು ಗಮನಿಸಿತ್ತು ಎಂದು ವರದಿಗಳು ಹೇಳಿದ್ದವು.

ಆದರೆ, ಕ್ಷಿಪಣಿ ಪರೀಕ್ಷೆ ನಡೆಯುತ್ತಿರುವ ಬಗ್ಗೆ ತನಗೆ ಮಾಹಿತಿ ಇತ್ತು ಎಂದೂ ಅದು ಹೇಳಿದೆ.

ADVERTISEMENT

‘ಅಮೆರಿಕದ ಯಾವುದೇ ಉಪಕರಣಗಳು ಭಾರತದ ಮೇಲೆ ಗೂಢಚರ್ಯೆ ನಡೆಸಿಲ್ಲ. ವಾಸ್ತವವಾಗಿ ಭಾರತದೊಂದಿಗೆ ನಾವು ನಿರಂತರ ಸಹಭಾಗಿತ್ವ ವಿಸ್ತರಿಸುತ್ತಿದ್ದೇವೆ. ಇದರ ಪರಿಣಾಮ ಆರ್ಥಿಕ ಒಪ್ಪಂದಗಳಲ್ಲಿ ಪರಸ್ಪರ ಕಾರ್ಯಸಾಧ್ಯತೆಗಳು ಹೆಚ್ಚಾಗಿವೆ ಮತ್ತು ಇನ್ನಷ್ಟು ಗಟ್ಟಿಯಾಗಿವೆ’ ಎಂದು ಅಮೆರಿಕದ ರಕ್ಷಣಾ ಇಲಾಖೆಯ ವಕ್ತಾರ ಲೆಫ್ಟಿನೆಂಟ್‌ ಕರ್ನಲ್‌ ಡೇವಿಡ್‌ ಡಬ್ಲ್ಯೂ ಈಸ್ಟ್‌ಬರ್ನ್‌ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ವಾಯು ಪ್ರದೇಶದಲ್ಲಿ ಸೇನಾ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ವಾಯನೌಕೆಯೊಂದು ಗುರುತಿಸಿತ್ತು. ಅಮೆರಿಕದ ನೌಕೆಯೇ ಇಂಥ ಗೂಢಚರ್ಯೆ ನಡೆಸುತ್ತಿದೆ ಎಂದು ವ್ಯಾಖ್ಯಾನಿಸಲಾಗಿತ್ತು.

‘ಈ ಬೆಳವಣಿಗೆ ಅಮೆರಿಕ ಮತ್ತು ಭಾರತದ ನಡುವಿನ ಸಂಯೋಜನೆಯನ್ನು ಸೂಚಿಸುತ್ತದೆ ಎನ್ನಲಾಗದು. ಭಾರತ ನಡೆಸುವ ಚಟುವಟಿಕೆಗಳ ಕುರಿತು ಅಮೆರಿಕದ ಗುಪ್ತಚರ ಸಂಸ್ಥೆಗಳು ಸಾಕಷ್ಟು ಮುಂಚಿತವಾಗಿಯೇ ಅರಿತಿದ್ದವು. ಈ ದೃಷ್ಟಿಯಲ್ಲಿ ಅಮೆರಿಕ ಒಂದು ಹಂತದವರೆಗೆ ಬೇಹುಗಾರಿಕೆ ನಡೆಸಿತ್ತು ಎಂಬುದನ್ನು ಸೂಚಿಸುತ್ತದೆ’ ಎಂದು ಹಾರ್ವರ್ಡ್‌ ಸ್ಮಿತ್‌ಸಾನಿಯನ್‌ ಸೆಂಟರ್‌ ಫಾರ್‌ ಆಸ್ಟ್ರೋಫಿಸಿಕ್ಸ್‌ನ ಬಾಹ್ಯಾಕಾಶ ವಿಜ್ಞಾನಿ ಜೊನಾತನ್‌ ಮ್ಯಾಕ್‌ಡೊಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.