ಟೆಹರಾನ್:ಇರಾನ್‌ನಲ್ಲಿ ಸೋಮವಾರ ಕೋವಿಡ್-19 ರೋಗದಿಂದ 96 ಮಂದಿ ಸಾವಿಗೀಡಾಗಿದ್ದಾರೆ. ಅದೇ ವೇಳೆ ಇದೇ ಮೊದಲ ಬಾರಿ ಸೋಂಕು ಪ್ರಕರಣಗಳ ಸಂಖ್ಯೆ 1,000ಕ್ಕಿಂತಲೂ ಕಡಿಮೆಯಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.
ಕಳೆದ 24 ಗಂಟೆಗಳಲ್ಲಿ ಸಾವಿಗೀಡಾದವರ ಸಂಖ್ಯೆ ಸೇರಿಸಿ ಇಲ್ಲಿಯವರೆಗೆ 5, 806 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ವಕ್ತಾರ ಕಿಯಾನೌಶ್ ಜಹಾನ್‌ಪುರ್ ಹೇಳಿದ್ದಾರೆ.
ಅಂಕಿ- ಅಂಶಗಳು
ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ 2020 ಏಪ್ರಿಲ್ 27ರಂದು ಜಗತ್ತಿನಾದ್ಯಂತ 85517 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಸಾವಿನ ಸಂಖ್ಯೆ 1,96, 295.ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ 2,858,635.ಇವತ್ತು 5,955 ಮಂದಿ ಸಾವಿಗೀಡಾಗಿದ್ದಾರೆ.
ಸೋಂಕು ದೃಢಪಟ್ಟ ಪ್ರಕರಣಗಳು
ಯುರೋಪ್- 1,341,851
ಅಮೆರಿಕ- 1,140,520
ಪೂರ್ವ ಮೆಡಿಟರೇನಿಯನ್- 165,369
ಅತೀ ಹೆಚ್ಚು ಪ್ರಕರಣಗಳು ವರದಿಯಾಗಿದ್ದು
ಅಮೆರಿಕ- 931,698
ಸ್ಪೇನ್- 219764
ಇಟಲಿ- 195351
ಜರ್ಮನಿ- 154175
ಬ್ರಿಟನ್ - 148381
ಫ್ರಾನ್ಸ್-123857
ಕೊರೊನಾ ವೈರಸ್ ಸೋಂಕಿನಿಂದಾಗಿ ಅಮೆರಿಕದಾದ್ಯಂತ ಒಂದೇ ದಿನ 1,330 ಜನ ಮೃತಪಟ್ಟಿದ್ದಾರೆ.
ಇದರೊಂದಿಗೆ ಅಮೆರಿಕದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 54,856ಕ್ಕೆ ಏರಿಕೆಯಾಗಿದೆ. ಈವರೆಗೆ 965,426 ಮಂದಿಗೆ ಸೋಂಕು ತಗುಲಿದೆ. ಈ ಪೈಕಿ 106,985 ಜನ ಚೇತರಿಸಿಕೊಂಡಿದ್ದಾರೆ.
ಜಾನ್ ಹಾಕಿನ್ಸ್ ಮಾಹಿತಿ ಪ್ರಕಾರ, ವಿಶ್ವದಾದ್ಯಂತ ಈವರೆಗೆ 2,970,705 ಜನರಿಗೆ ಕೊರೊನಾ ಸೋಂಕು ತಗುಲಿದೆ. 206,495 ಜನ ಮೃತಪಟ್ಟಿದ್ದು, 865,549 ಜನ ಗುಣಮುಖರಾಗಿದ್ದರೆ.
ಕೊರೊನಾದಿಂದಾಗಿ ವಿಶ್ವದಲ್ಲೇ ಅತಿ ಹೆಚ್ಚು ಸಾವು ಅಮೆರಿಕದಲ್ಲಿ ಸಂಭವಿಸಿದೆ. ಎರಡನೇ ಸ್ಥಾನದಲ್ಲಿ ಇಟಲಿ ಇದೆ. ಅಲ್ಲಿ 197,675 ಪ್ರಕರಣಗಳು ಈವರೆಗೆ ವರದಿಯಾಗಿದ್ದು, 26,644 ಮಂದಿ ಮೃತಪಟ್ಟಿದ್ದಾರೆ.
ಈವರೆಗೆ ಸ್ಪೇನ್‌ನಲ್ಲಿ 226,629 ಪ್ರಕರಣ, 23,190 ಸಾವು; ಫ್ರಾನ್ಸ್‌ನಲ್ಲಿ 162,220 ಪ್ರಕರಣ, 22,890 ಸಾವು ಹಾಗೂ ಬ್ರಿಟನ್‌ನಲ್ಲಿ 154,037 ಪ್ರಕರಣ, 20,794 ಸಾವು ವರದಿಯಾಗಿವೆ.
ಕೊರೊನಾ ಮೊದಲು ಕಾಣಿಸಿಕೊಂಡ ಚೀನಾದಲ್ಲಿ ಒಟ್ಟು 83,909 ಪ್ರಕರಣಗಳು ವರದಿಯಾಗಿದ್ದು, 4,636 ಜನ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.