ADVERTISEMENT

ವೆನೆಜುವೆಲಾ: ತೈಲ ಮಸೂದೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 16:20 IST
Last Updated 23 ಜನವರಿ 2026, 16:20 IST
.
.   

ಕರಾಕಸ್‌: ತೈಲದ ಮೇಲೆ ರಾಷ್ಟ್ರೀಯ ಹಿಡಿತ ಸಡಿಲಿಸುವ ಮಸೂದೆಯ ಕುರಿತ ಚರ್ಚೆಯನ್ನು ವೆನೆಜುವೆಲಾ ಗುರುವಾರ ಆರಂಭಿಸಿತು.

ಸಮಾಜವಾದಿ ನಾಯಕ ಹ್ಯೂಗೋ ಚಾವೆಜ್ ಅವರು 2007ರಲ್ಲಿ ತೈಲೋದ್ಯಮವನ್ನು ರಾಷ್ಟ್ರೀಕರಣಗೊಳಿಸಿದ ನಂತರ ಮೊದಲ ಬಾರಿಗೆ ಈ ಕುರಿತ ಚರ್ಚೆ ನಡೆದಿದೆ. 

ಈ ಮಸೂದೆಯು ತೈಲ ಉದ್ಯಮದಲ್ಲಿ ಖಾಸಗಿ ಕಂಪನಿಗಳಿಗೆ ಹೂಡಿಕೆ ಮಾಡಲು ಮತ್ತು ಹೂಡಿಕೆ ವಿವಾದಗಳಿಗೆ ಅಂತರರಾಷ್ಟ್ರೀಯ ಮಧ್ಯಸ್ಥಿಕೆಯನ್ನು ಸ್ಥಾಪಿಸಲು ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ.

ADVERTISEMENT

ವೆನೆಜುವೆಲಾದ ಅಧ್ಯಕ್ಷರಾಗಿದ್ದ ನಿಕೋಲಸ್ ಮಡೂರೊ ಅವರನ್ನು ಈ ತಿಂಗಳ ಆರಂಭದಲ್ಲಿ ಟ್ರಂಪ್‌ ಆಡಳಿತವು ಸೆರೆ ಹಿಡಿದಿತ್ತು.

ಮಡೂರೊ ಬಂಧನದ ಬಳಿಕ ಅಮೆರಿಕದ ಇಂಧನ ಕಂಪನಿಗಳಿಂದಲೇ ಹೆಚ್ಚಿನ ಹೂಡಿಕೆಯನ್ನು ಆಹ್ವಾನಿಸುವಂತೆ ವೆನೆಜುವೆಲಾದ ಈಗಿನ ಆಡಳಿತದ ಮೇಲೆ ಡೊನಾಲ್ಡ್‌ ಟ್ರಂಪ್‌ ಆಡಳಿತವು ಒತ್ತಡ ಹಾಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.