ADVERTISEMENT

ಶುಕ್ರಗ್ರಹ ವಾಸಕ್ಕೆ ಯೋಗ್ಯವಾಗಿತ್ತು: ನಾಸಾ

ಪಿಟಿಐ
Published 23 ಸೆಪ್ಟೆಂಬರ್ 2019, 15:53 IST
Last Updated 23 ಸೆಪ್ಟೆಂಬರ್ 2019, 15:53 IST
   

ವಾಷಿಂಗ್ಟನ್‌: ಶುಕ್ರಗ್ರಹದಲ್ಲಿ 2–3 ಶತಕೋಟಿ ವರ್ಷಗಳ ಕಾಲ ನೀರಿನ ಅಂಶ (ದ್ರವರೂಪದಲ್ಲಿ) ಇತ್ತು. 70 ಕೋಟಿ ವರ್ಷಗಳ ಹಿಂದೆ ನಡೆದ ರೂಪಾಂತರದ ಪರಿಣಾಮ ಗ್ರಹದ ಶೇ 80ರಷ್ಟು ಮೇಲ್ಮೈ ಬದಲಾವಣೆಗೊಂಡಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಅಧ್ಯಯನವೊಂದು ತಿಳಿಸಿದೆ.

ಈ ಅಧ್ಯಯನವು ಶುಕ್ರ ಗ್ರಹದ ವಾತಾವರಣದ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಲಿದೆ. ವಾಸಯೋಗ್ಯ ಗ್ರಹಗಳ ಹುಡುಕಾಟದಲ್ಲಿ ಇದು ಹೊಸ ಸಾಧ್ಯತೆಗಳನ್ನು ತೆರೆದಿದೆ.

ನಲವತ್ತು ವರ್ಷಗಳ ಹಿಂದೆ ನಾಸಾದ ‘ಪಯೋನಿಯರ್‌’ ನೌಕೆಯು ಶುಕ್ರಗ್ರಹದಲ್ಲಿ ಕಡಿಮೆ ಆಳದ ಸಮುದ್ರ ಇತ್ತು ಎಂಬ ಸುಳಿವು ನೀಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.