ADVERTISEMENT

ಇಸ್ರೇಲ್‌ ಅಧ್ಯಕ್ಷರಾಗಿ ಹಿರಿಯ ರಾಜಕಾರಣಿ ಐಸಾಕ್‌ ಹರ್ಜಾಗ್‌ ಆಯ್ಕೆ

ಏಜೆನ್ಸೀಸ್
Published 2 ಜೂನ್ 2021, 11:07 IST
Last Updated 2 ಜೂನ್ 2021, 11:07 IST
ಐಸಾಕ್‌ ಹರ್ಜಾಗ್‌
ಐಸಾಕ್‌ ಹರ್ಜಾಗ್‌   

ಜೆರುಸಲೇಮ್‌: ಹಿರಿಯ ರಾಜಕಾರಣಿ ಐಸಾಕ್‌ ಹರ್ಜಾಗ್‌ ಅವರು ಇಸ್ರೇಲ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

120 ಸದಸ್ಯ ಬಲದ ಇಸ್ರೇಲ್‌ ಸಂಸತ್‌ನಲ್ಲಿ ಗುಪ್ತ ಮತದಾನದ ಮೂಲಕ ಈ ಆಯ್ಕೆ ನಡೆಯಿತು. ಪ್ರಸ್ತುತ ಅಧ್ಯಕ್ಷರಾಗಿರುವ ರೆವೆನ್‌ ರಿವ್‌ಲಿನ್ ಅವರ ಅಧಿಕಾರಾವಧಿ ಮುಂದಿನ ತಿಂಗಳು ಕೊನೆಗೊಳ್ಳಲಿದೆ.

ಹರ್ಜಾಗ್‌ ಅವರು ಲೇಬರ್‌ ಪಾರ್ಟಿಯ ಮುಖ್ಯಸ್ಥರೂ ಆಗಿದ್ದರು. ಕೆಲ ಕಾಲ ವಿರೋಧ ಪಕ್ಷದ ನಾಯಕರೂ ಆಗಿದ್ದ ಅವರು, 2013ರಲ್ಲಿ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು.

ADVERTISEMENT

60 ವರ್ಷದ ಹರ್ಜಾಗ್‌ ಅವರು ಇಸ್ರೇಲ್‌ನ ಪ್ರತಿಷ್ಠಿತ ಜಿಯೋನಿಸ್ಟ್‌ ಕುಟುಂಬಕ್ಕೆ ಸೇರಿದವರು. ಅವರ ತಂದೆ ಚೇಮ್‌ ಹರ್ಜಾಗ್‌ ಅವರು ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ನ ರಾಯಭಾರಿಯಾಗಿ, ನಂತರ ಇಸ್ರೇಲ್‌ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.