ADVERTISEMENT

Video: ಇಂಡೋನೇಷ್ಯಾದಲ್ಲಿ ಅಗ್ನಿ ಅವಘಡ; ಮಸೀದಿಯ ಗುಮ್ಮಟ ಪತನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಅಕ್ಟೋಬರ್ 2022, 6:28 IST
Last Updated 20 ಅಕ್ಟೋಬರ್ 2022, 6:28 IST
ಇಂಡೋನೇಷ್ಯಾದ ಮಸೀದಿಯಲ್ಲಿ ಅಗ್ನಿ ಅವಘಡ
ಇಂಡೋನೇಷ್ಯಾದ ಮಸೀದಿಯಲ್ಲಿ ಅಗ್ನಿ ಅವಘಡ   

ಜಕಾರ್ತ: ಇಂಡೋನೇಷ್ಯಾದ ಜಕಾರ್ತದಲ್ಲಿ ಇಸ್ಲಾಮಿಕ್ ಸೆಂಟರ್ ಗ್ರ್ಯಾಂಡ್ ಮಸೀದಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ನವೀಕರಣ ಕಾಮಗಾರಿಯ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಮಸೀದಿಯ ಮೇಲಿದ್ದ ಬೃಹದಾಕಾರದ ಗುಮ್ಮಟ ಕುಸಿದಿದೆ.

ಈ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ADVERTISEMENT

ಬೆಂಕಿಯನ್ನು ನಂದಿಸಲು 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ ಎಂದು ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.

ಬೆಂಕಿ ಹೊತ್ತಿಕೊಂಡಿದ್ದರ ಹಿಂದಿನ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.