ADVERTISEMENT

ಬೂಸ್ಟರ್‌ ಡೋಸ್‌ ಪಡೆಯುವಂತೆ ಅಮೆರಿಕ ಸಲಹೆ

ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ

ಏಜೆನ್ಸೀಸ್
Published 13 ಜುಲೈ 2022, 13:40 IST
Last Updated 13 ಜುಲೈ 2022, 13:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಕೊರೊನಾ ರೂಪಾಂತರಿ ತಳಿ ಬಿಎ.4 ಮತ್ತು ಬಿಎ.5 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಅರ್ಹರು ಬೂಸ್ಟರ್‌ ಡೋಸ್‌ ಕೋವಿಡ್‌ ಲಸಿಕೆ ಪಡೆಯುವಂತೆ ಮತ್ತು ಮನೆಯ ಒಳಗೂ ಮಾಸ್ಕ್‌ ಧರಿಸುವಂತೆಅಮೆರಿಕ ಸರ್ಕಾರ ಸಲಹೆ ನೀಡಿದೆ.

ಬಿಎ.4 ಮತ್ತು ಬಿಎ.5 ಓಮೈಕ್ರಾನ್‌ ಕೋವಿಡ್ ವೈರಸ್‌ನ ಉಪತಳಿಗಳಾಗಿದ್ದು, ಈ ಹಿಂದಿನ ತಳಿಗಳಿಗಿಂತ ಅತಿ ಹೆಚ್ಚು ಸಾಂಕ್ರಾಮಿಕವಾದವುಗಳು. ಹೀಗಾಗಿ ಇತ್ತೀಚೆಗೆ ಸೋಂಕಿಗೆ ಒಳಗಾಗಿದ್ದರೂ ಬೂಸ್ಟರ್‌ ಡೋಸ್ ಲಸಿಕೆ ಪಡೆಯುವುದು ಸೂಕ್ತ ಎಂದು ಶ್ವೇತಭವನದ ವೈದ್ಯರು ತಿಳಿಸಿದ್ದಾರೆ

‘ದೇಶದಲ್ಲಿ ಕಳೆದ ಏಪ್ರಿಲ್‌ನಿಂದ ಕೊರೊನಾ ಸೋಂಕಿನಿಂದ ಆಸ್ಪತ್ರೆ ಸೇರುವವರ ಪ್ರಮಾಣ ದ್ವಿಗುಣವಾಗಿದೆ. ಇದು ಹೊಸ ಉಪ ತಳಿ ವೇಗವಾಗಿ ಹರಿಡುತ್ತಿರುವುದರ ಸಂಕೇತ’ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ನಿರ್ದೇಶಕ ಡಾ.ರೊಚೆಲ್ಲೆ ವಾಲೆನ್‌ಸ್ಕಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.