ADVERTISEMENT

ಲೀಸಾಗೆ ಲೇಬರ್‌ ಪಕ್ಷದ ನಾಯಕತ್ವ?

ಪಿಟಿಐ
Published 15 ಡಿಸೆಂಬರ್ 2019, 19:55 IST
Last Updated 15 ಡಿಸೆಂಬರ್ 2019, 19:55 IST

ಲಂಡನ್‌: ಬ್ರಿಟನ್‌ನ ಸಂಸತ್‌ಗೆ ಗುರುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮರು ಆಯ್ಕೆಯಾಗಿರುವ ಭಾರತ ಸಂಜಾತ ಸಂಸದೆ ಲೀಸಾ ನಂದಿ ಈಗ ಲೇಬರ್‌ ಪಕ್ಷದ ನಾಯಕತ್ವ ವಹಿಸುವ ಆಕಾಂಕ್ಷಿಯಾಗಿದ್ದಾರೆ.

ಚುನಾವಣೆಯಲ್ಲಿ ಲೇಬರ್‌ ಪಕ್ಷ ಹೀನಾಯ ಸೋಲು ಅನುಭವಿಸಿರುವುದರಿಂದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಜೆರೆಮಿ ಕಾರ್ಬಿನ್‌ ಅವರಿಗೆ ಒತ್ತಡ ಹೇರಲಾಗುತ್ತಿದೆ. ಮುಂದಿನ ಚುನಾವಣೆಯ ನಾಯಕತ್ವವನ್ನು ವಹಿಸುವುದಿಲ್ಲ ಎಂದು ಕಾರ್ಬಿನ್‌ ಸಹ ಚುನಾವಣೆ ಫಲಿತಾಂಶದ ಬಳಿಕ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT